ಹೊನ್ನಾವರ: ಪಟ್ಟಣದ ಸೇಂಟ್ ಅಂತೋನಿ ಪ್ರೌಢಶಾಲಾ ಮೈದಾನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ 16ನೇ ವರ್ಷದ ‘ಶರಾವತಿ ಉತ್ಸವ’ ಡಿಸೆಂಬರ್ 4 ರಂದು ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಹೇಳಿದರು. ಅವರು ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.4 ರಂದು 4.30ಕ್ಕೆ ಪ್ರತಿಭಾನ್ವಿತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ತಾಯಿ ಶರಾವತಿ ನಮನದಲ್ಲಿ ಶರಾವತಿ ಜಲಕುಂಭಕ್ಕೆ ಆರತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಭಟ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

RELATED ARTICLES  ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯ? : ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಮುಖ್ಯ ಅತಿಥಿಗಳಾಗಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ
ಶಿವಾನಂದ ಹೆಗಡೆ ಕಡತೋಕಾ ಉಪಸ್ಥಿತಿ ವಹಿಸಲಿದ್ದಾರೆ. ವೈದ್ಯರಾದ ಡಾ.ರಾಜೇಶ ಕಿಣಿ, ಯಕ್ಷಗಾನ ಕಲಾವಿದರಾದ ಸರ್ವೇಶ್ವರ ಹೆಗಡೆ, ನಿವೃತ್ತ ಸೈನಿಕ ಈಶ್ವರ ನಾಯ್ಕ ಇವರನ್ನು ಸನ್ಮಾನಿಸಲಾಗುವುದು ಎಂದರು.

ಸಭಾ ಕಾರ್ಯಕ್ರಮದ ಬಳಿಕ ನಾಟ್ಯಂಜಲಿ ಕಲಾ ಕೇಂದ್ರ ಶಿರಸಿ ಇವರಿಂದ ಭರತನಾಟ್ಯ, ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ವಿದ್ಯಾರ್ಥಿಗಳಿಂದ ಸುಗ್ಗಿ ಕುಣಿತ ಹಾಗೂ ಯಕ್ಷಗಾನ ನೃತ್ಯವೈಭವ, ಗಂಧರ್ವ ಕಲಾಕೇಂದ್ರ ಕುಮಟಾ ಇವರಿಂದ ಸಂಗೀತ ಕಾರ್ಯಕ್ರಮ, ದಿವಾಕರ ಇಂಗ್ಲಿಷ್ ಮಾಧ್ಯಮ ಶಾಲೆ ಧಾರೇಶ್ವರ ಇವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.

RELATED ARTICLES  ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಕಲಾಕಾರ ರವೀಂದ್ರ ಹೆಗಡೆ

ರಾತ್ರಿ 8.30 ರಿಂದ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಶರಾವತಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಉಪಸ್ಥಿತರಿದ್ದರು.