ಯಲ್ಲಾಪುರ: ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯ ಹಾಗೂ ವರದಿಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ್ ಇವರಿಗೆ ಬಸ್ಗಾಗಿ ಕಾದು ನಿಂತಿದ್ದ ಸಂದರ್ಭದಲ್ಲಿ, ದ್ವಿಚಕ್ರ ವಾಹನವೊಂದು ಹಿಂಬದಿಯಿಂದ ಬಡಿದ ಪರಿಣಾಮ ಅವರು ತೀವ್ರ ಗಾಯಗೊಂಡ ಘಟನೆ ದಾರವಾಡ ಬೆಳಗಾವಿ ರಾ.ಹೆ ಬೇಲೂರು ಕೈಗಾರಿಕಾ ಪ್ರದೇಶದ ಕ್ರಾಸ್ ಬಳಿ ಸಂಭವಿಸಿದೆ.

ಕಾರ್ಯನಿಮಿತ್ತ ದಾರವಾಡಕ್ಕೆ ಹೋಗಿದ್ದ ಇವರು ಬಸ್ಸಿಗೆ ಕಾದು ರಸ್ತೆ ಬದಿಯಲ್ಲಿ ನಿಂತಿದ್ದಾಗ ಅತೀವೇಗ ಮತ್ತು ನಿಷ್ಕಾಳಜಿಯಿಂದ ಬಂದ ಮೋಟರ್ ಸೈಕಲ್ ಸವಾರ ಡಿಕ್ಕಿಪಡಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇವರ ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಇವರನ್ನು ಕೂಡಲೇ ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಸತ್ತೂರಿನ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಗಟಾರಕ್ಕೆ ಉರುಳಿ ಬಿದ್ದ ಪೆಟ್ರೋಲ್ ಟ್ಯಾಂಕರ್

ತೀವ್ರನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೋಟರ್ ಸೈಕಲ್ ಸವಾರನ ಮೇಲೆ ಗರಗ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES  44 ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ..!

ಇದನ್ನೂ ಓದಿ.