ಹೊನ್ನಾವರ : ಶಾಲಾ ಬಸ್ ಹಾಗೂ ಲಗೇಜ್ ವಾಹನ ನಡುವೆ ಡಿಕ್ಕಿ ಸಂಭವಿಸಿ ಲಗೇಜ್ ವಾಹನ ರಸ್ತೆಯಲ್ಲೆ ಪಲ್ಟಿಯಾದ ಘಟನೆ ತಾಲೂಕಿನ ಚಂದ್ರಾಣಿ ಸಮೀಪ ರವಿವಾರ ಮುಂಜಾನೆ ಸಂಭವಿಸಿದೆ. ಅರೇಅಂಗಡಿ ಮಾರ್ಗದಿಂದ ಹೊನ್ನಾವರ ಕಡೆ ತೆರಳುತ್ತಿದ್ದ ಲಗೇಜ್ ವಾಹನವು ಚಂದ್ರಾಣಿ ಬಳಿ ಇರುವ ಗ್ಯಾರೇಜ್ ಕಡೆಯಿಂದ ಹೊನ್ನಾವರ ಕಡೆ ಹೋಗಲು ಆಗಮಿಸಿದ ವಿಜಯಪುರದ ಶಾಲಾ ವಾಹನಕ್ಕೆ ಡಿಕ್ಕಿಯಾಗಿದೆ. ಶಾಲಾ ಬಸ್ ರಸ್ತೆಗೆ ಒಮ್ಮೆಲೆ ತಂದಿರುವದರಿಂದ ಈ ಅವಘಡ ಸಂಭವಿಸಿದೆ .

RELATED ARTICLES  ಕುಮಟಾದ ಸಮೀಪ ತುಂಬಿದ ಗ್ಯಾಸ್ ಟ್ಯಾಂಕರ್ ಪಲ್ಟಿ..!

ಬಸ್ ಒಂದು ಭಾಗಕ್ಕೆ ಡಿಕ್ಕಿಯಾದ ಲಗೇಜ್ ವಾಹನ ರಸ್ತೆಯಲ್ಲೆ ಪಲ್ಟಿಯಾಗಿದ್ದು, ಎರಡು ವಾಹನದಲ್ಲಿದ್ದವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ರಸ್ತೆ ಮಧ್ಯೆ ವಾಹನ ಪಲ್ಟಿಯಾದ ಪರಿಣಾಮ ಅರೇಅಂಗಡಿ ಹೊನ್ನಾವರ ಮಾರ್ಗದ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ವಿಜಯಪುರದಿಂದ ಶಾಲಾ ವಿದ್ಯಾರ್ಥಿಗಳಿದ್ದ ವಾಹನವು ಅಪಘಾತವಾಗಿರುದರಿಂದ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ. ಸ್ಥಳಕ್ಕೆ 112 ವಾಹನದ ಮೂಲಕ ಆಗಮಿಸಿದ ಹೊನ್ನಾವರ ಪೊಲೀಸ್ ಠಾಣಿಯ ಸಿಬ್ಬಂದಿಗಳು ಸ್ಥಳಿಯರ ಸಹಕಾರದಿಂದ ವಾಹನ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

RELATED ARTICLES  ಗೋಫಲ ಟ್ರಸ್ಟ್ ವತಿಯಿಂದ ಗೋಶಾಲೆಗಳಿಗೆ16.85 ಲಕ್ಷ ರೂಪಾಯಿ ದೇಣಿಗೆ