ಗೋಕರ್ಣ : ಅದು ಯಾವುದೇ ರೀತಿಯ ನಿಯಮಗಳನ್ನು ಜಾರಿಗೆ ತಂದರು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಪ್ರವಾಸಿಗರನ್ನ ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಉತ್ತರ ಕನ್ನಡಕ್ಕೆ ಪ್ರವಾಸಕ್ಕೆಂದು ಬರುವವರು ನೀರು ಪಾಲಾಗುತ್ತಿರುವ ಘಟನೆಗಳು ಮತ್ತೆ ಮತ್ತೆ ವರದಿಯಾಗುತ್ತಿದೆ. ಇಂದೂ ಸಹ ಅಂತಹುದೇ ಒಂದು ಘಟನೆ ವರದಿಯಾಗಿದೆ. ನೀರಲ್ಲಿ ಈಜಲು ತೆರಳಿದ್ದ ವೇಳೆ ಮುಳುಗಿ ಅಸ್ವಸ್ಥರಾಗಿದ್ದ ತಾಯಿ-ಮಗುವನ್ನು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ತದಡಿ ಸಮುದ್ರದಲ್ಲಿ ನಡೆದಿದೆ.

RELATED ARTICLES  ನಿನ್ನೆಯಿಂದ ನಾಪತ್ತೆಯಾಗಿದ್ದ ಮಹಿಳೆ ಬಾಡ ಸಮುದ್ರ ತೀರದಲ್ಲಿ ಶವವಾಗಿ ಪತ್ತೆ.

ಮನ್ಸೂರ್ ಶೇಖ್ (28), ರಜಾಕ್ (6) ಅಸ್ವಸ್ಥಗೊಂಡವರು. ಭಟ್ಕಳ ಮೂಲದ ಇವರು, ಗೋಕರ್ಣದ ತದಡಿಯ ಮುರಾದ್ ಅಹ್ಮದ್ ಎಂಬುವವರ ಮನೆಗೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಈ ವೇಳೆ ತದಡಿ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ.

RELATED ARTICLES  ಜ.೨೮ ಕ್ಕೆ ಹಣತೆ ಬೆಳಕಿನಲ್ಲಿ ಸಾರಾ ಅಬೂಬಕ್ಕರ್ : ಕಾಳಿ ತೀರದಲ್ಲಿ ‘ಚಂದ್ರಗಿರಿ ತೀರ’ದ ನೆನಪುಗಳು ಕಾರ್ಯಕ್ರಮ

ಮುಳುಗುವ ಹಂತ ತಲುಪಿದ್ದ ಇವರನ್ನ ಸಮೀಪದಲ್ಲೇ ಇದ್ದ ಬೋಟ್ ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದ್ದು, ಅಸ್ವಸ್ಥಗೊಂಡವರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.