ಕಾರವಾರ : ಧಾರವಾಡದಿಂದ ಕುಮಟಾಕ್ಕೆ ಬಿಸಿಎಮ್ ಹಾಸ್ಟೆಲ್ ಆಹಾರ ಸಾಮಗ್ರಿ ತರುತಿದ್ದ ಲಗೇಜ್ ಕ್ಯಾರಿಯರ್ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಮಿರ್ಜಾನ್ ಬಳಿ ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿ ಓರ್ವ ಸಾವು ಕಂಡ ಘಟನೆ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲೇ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES  ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕಾಗಿ ವಿಶೇಷ ಕಾಳಜಿ ವಹಿಸಬೇಕೆಂದು ಕೋರಿ ಪತ್ರ ಬರೆದ ಶಾಸಕ ಸುನೀಲ್ ನಾಯ್ಕ

ಧಾರವಾಡದಿಂದ ಕುಮಟಾಕ್ಕೆ ಬಿಸಿಎಮ್ ಹಾಸ್ಟೆಲ್ ಆಹಾರ ಸಾಮಗ್ರಿ ತರುತಿದ್ದ ಲಗೇಜ್ ಕ್ಯಾರಿಯರ್ ಅತೀ ವೇಗದಿಂದ ಬಂದು ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಅಲ್ಪ ಗಾಯಗಳಾಗಿದೆ. ಆದರೆ ಲಗೇಜ್ ಕ್ಯಾರಿಯರ್ ಸಹಾಯಕ ಧಾರವಾಡ ಮೂಲದ ಇಸ್ಮಯಲ್ ರೋಣದ್ ಸಾವು ಕಂಡಿದ್ದಾರೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಘರ್ ಘರ್ ಭಜನ್ ನೂರನೆಯ ಕಾರ್ಯಕ್ರಮ : ಉತ್ತರಕನ್ನಡ ದಿಂದ ಅತಿಥಿಯಾಗಿ ಭಾಗವಹಿಸಿದ ಚಿದಾನಂದ ಭಂಡಾರಿ