ಕುಮಟಾ : ಇತ್ತಿಚೆಗೆ ಬೆಳಗಾವಿಯಲ್ಲಿ ಜರುಗಿದ ಪದವಿಪೂರ್ವ ಕಾಲೇಜುಗಳ ವಿಭಾಗ ಮಟ್ಟದ ಪಠ್ಯೇತರ ಚಟುವಟಿಕೆಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಧಾತ್ರಿ ಅಕಾಡೆಮಿಯ ಸಹಯೋಗದ ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಬಿ. ಕೆ. ಭಂಡಾರರ‍್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಿಸಿದ ಹಲವಾರು ವಿಭಾಗಗಳಲ್ಲಿ ಅನುಪಮ ಸಾಧನೆ ಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾಗವಹಿಸಿದ ಒಟ್ಟೂ ಆರು ಸ್ಪರ್ಧೆಗಳಲ್ಲಿ ಐದು ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಕಾಲೇಜಿನ ಹಾಗೂ ಉತ್ತರಕನ್ನಡ ಜಿಲ್ಲೆಯ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ಶುಭಾ ನಾಯ್ಕ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಕು. ಅದ್ವೈತ ಕಡ್ಲೆ ಹಾಗೂ ಕು. ರಾಘವೇಂದ್ರ ಎನ್ ಇವರ ತಂಡವು ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ, ಕು. ಸೊನಾಲಿ ಶೇಟ್ ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ, ಕು. ಆಂಡ್ರಿಯಾ ವಲ್ಲಾಡೊ ಇಂಗ್ಲೀಷ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಕು. ಆಂಡ್ರಿಯಾ ಗೊನ್ಸಾಲ್ವೀಸ್ ಆಂಗ್ಲ ಭಾಷಾ ಚರ್ಚಾಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿ, ಪ್ರಾಚಾರ್ಯರಾದ ಶ್ರೀ. ಕಿರಣ ಭಟ್ಟ, ಉಪಪ್ರಾಚಾರ್ಯರಾದ ಶ್ರೀಮತಿ ಸುಜಾತಾ ಹೆಗಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಕು. ಕವಿತಾ ಗೌಡ, ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಮುಂದಿನ ಸ್ಪರ್ಧೆಗೆ ಶುಭಹಾರೈಸಿದ್ದಾರೆ.