ಮುಳ್ಳೇರಿಯ: ಶ್ರೀ ರಾಮಚಂದ್ರಾಪುರ ಮಠ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದ ಮತ್ತು ಆದೇಶದ ಮೇರೆಗೆ ಕಾರ್ಯವೆಸಗುತ್ತಿರುವ ಹವ್ಯಕ ಮಹಾಮಂಡಲ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಆಶ್ರಯದಲ್ಲಿ ಶಾವಣಕೆರೆ ಮಠದ ಸಭಾಭವನದಲ್ಲಿ ಗುಂಪೆ ವಲಯೋತ್ಸವ ವ ವಿಜೃಂಭಣೆಯಿಂದ ಜರಗಿತು.

ದೀಪ ಪ್ರಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ ಯೊದಿಂಗೆ ಔಪಚಾರಿಕ ಉದ್ಘಾಟನ ಸಮಾರಂಭ ಜರಗಿತು. ಕಾರ್ಯಕ್ರಮವನ್ನು ಶ್ರೀ ಯುತ ಅಮ್ಮಕಂಲ್ಲು ರಾಮಭಟ್ಟ ಉದ್ಘಾಟಿಸಿದರು.

ಶಿವಪಂಚಕ್ಪಾರೀ ಸ್ತ್ರೋತ್ರ, ಕುಂಕುಮಾರ್ಚನೆ ಮಾತೃ ವಿಭಾಗದ ಶ್ರೀ ಮತಿ ರೇವತಿಅಮ್ಮ ಮತ್ತು ವಿದ್ಯಾರ್ಥಿವಾಹಿನಿ ವಿಭಾಗದ ಅನ್ನಪೂರ್ಣ ಬೆಜಪ್ಪೆ ರಿಂದ ನಡೆಸಲಾಯಿತು.

ವಲಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಭಾವಗೀತೆ, ಕಥಾಪ್ರಸಂಗ, ಕಥೆ, ಕೀಬೋರ್ಡ್ ವಾದನ, ಹಿರಿಯ ರಿಂದ ದೇವನಾಮ ಸಂಕೀರ್ತನೆ ಮುತಾಂದ ಹಲವು ವಿಷಯಗಳಲ್ಲಿ 20ಮಂದಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಶಾವಣಕೆರೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೇ ಕಾತೀಕ ಪೂಜೆ ಮಹಾಪೂಜೆ,ಪ್ರಸಾದ ವಿತರಣೆ, ಸ್ವದಿಷ್ಟವಾದ ಪ್ರಸಾದ ಭೋಜನ ಮಾಡಲಾಯಿತು.

ವಲಯೋತ್ಸವದ ಸಭಾಕಾಯಕ್ರಮವು ವಲಯಾಧ್ಯಕ್ಷರಾದ ಶ್ರೀ ಯುತ ಅಮ್ಮಕಂಲ್ಲು ರಾಮ ಭಟ್ ಅಧ್ಯಕ್ಷತೆ ಯಲ್ಲಿ ಜರುಗಿತು. ಮುಳ್ಳೇರಿಯಾ ಹವ್ಯಕ ಮಂಡಲ ಅಧ್ಯಕ್ಷ ಪ್ರೋ. ಶ್ರೀ ಕೃಷ್ಣ ಭಟ್, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಕುಮಾರ್ ಪೈಸಾರಿ, ಮಂಡಲ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ವಿದ್ಯಾರ್ಥಿವಾಹಿನೀ ಕೇಶವಪ್ರಸಾದ ಎಡಕ್ಕಾನ, ಕುಂಬಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ ಅತಿಥಿಗಳಾಗಿ ಭಾಗವಹಿಸಿದ್ದರು.

RELATED ARTICLES  ಈ ವರ್ಷ ಜುಲೈ 1ರಿಂದ ಆಧಾರ್‌ ದೃಢೀಕರಣಕ್ಕೆ ಮುಖದ ಬಿಂಬ

ಕು. ಚಿನ್ಮಯಿ ಬೆಜಪ್ಪೆ ಪ್ರಾಥನೆ ಮಾಡಿ ಶ್ರೀ ಯುತ ಜಯರಾಮ ಭಟ್ ಚೆಕ್ಕೆ ಸ್ವಾಗಾತಿಸಿದರುಶ್ರೀ ಯುತ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಾರ್ಯಕ್ರಮ ನಿರೂಪಿಸಿ ವಲಯದ ವಾರ್ಷಿಕ ವರದಿಯನ್ನು ಮಂಡಿಸಿದರು.

ಶ್ರೀ ಯುತ ಬಾಲಕೃಷ್ಣ ಶರ್ಮ ರು ಮಠ-ಸಮಾಜ ಯೋಜನೆ ಗಳಾದ ಮೂಲಮಠ, ಗೋಸಂಜೀವಿನಿ, ಮಾತೃ ವಿಭಾಗ, ವಿದ್ಯಾರ್ಥಿವಾಹಿನೀ, ಬಿಂದು-ಸಿಂಧು, ಮುಷ್ಟಿ ಅಕ್ಕಿ, ಜೀವಿಕ, ವಿವಿಧ ಸಮಾಜಮುಖಿ ಯೋಜನೆಗಳ ಮತ್ತು ಸಮಾಜ ಬಾಂಧವರು ಸ್ಪಂದನೆ ಯಾವ ರೀತಿಯಲ್ಲಿರಬೇಕು ಎಂದು ತಿಳಿಯಪಡಿಸಿದರು.

ಶ್ರೀ ನಿಧಿ ತೆಂಕಕರೆ, ಅನಂತಕೃಷ್ಣ ಗುಂಪೆ ವಿದ್ಯಾರ್ಥಿಗಳಿಗೆ ವಲಯದ ವತಿಯಿಂದ ಪ್ರತಿಭಾಪುರಸ್ಕಾರ ಮಾಡಲಾಯಿತು, ದೇಶೀಯ ಗೋ ತಳಿ, ಸಾವಯವಕೃಷಿಯನ್ನು ನಡೆಸುವ ಕೃಷಿಕ ಮಾಣಿ ವೆಂಕಟರಮಣ ಭಟ್, ಶಂಕರಧ್ಯಾನ ಮಂದಿರಕ್ಕೆ ಸ್ಥಳವನ್ನು ಕೊಟ್ಟು ಭಾರತೀಯ ಗೋ ತಳಿಗಳನ್ನು ಅಭಿವೃದ್ಧಿ ಮಾಡುವಂತ ಶ್ರೀ ಯುತ ವೆಂಕಟರಮಣ ಭಟ್ ಎಡಕ್ಕಾನ, ಹಿಂದೆ ಕುಡಾಲು-ಬಾಡುರು ವಲಯ ವಿದ್ದಗಾ ಮಾತೃಪ್ರಧಾನೆ ಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ವೆಂಕಟೇಶ್ವರಿ ಅಮ್ಮ ಪೂಕಳ ಇವರನ್ನು ಗೌರವಿಸಲಾಯಿತು.

ಕು. ಶ್ರೀ ದೇವಿ ಇವರಿಗೆ ಶ್ರೀ ಮಠದಿಂದಕೊಡಮಾಡಿದ ವಿದ್ಯಾಸಹಾಯ ನೀಡಲಾಯಿತು,
ತೀವ್ರ ಅಸೌಕ್ಯದಿಂದ ವಿಶ್ರಾಂತಿ ಯಲ್ಲಿ ಇರುವ ಶ್ರೀ ಯುತ ವಿಷ್ಣು ಭಟ್ ಕರುವಜೆ ಇವರಿಗೆ ವಲಯದ ವತಿಯಿಂದ *ಮಂಚ*ವನ್ನು ಅವರ ಅಣ್ಣ ಕರುವಜೆ ವೆಂಕಟರಮಣ ಮೂಲಕ ನೀಡಲಾಯಿತು,ವಿದ್ಯಾರ್ಥಿಗಳಾದ ಕು. ಶ್ರೀ ದೇವಿ ಮತ್ತು ಕು. ರಮ್ಯ ಇವರಿಗೆ ಓದಲು *ಮೇಜು&ಚಯರು*ನೀಡಲಾಯಿತು.

RELATED ARTICLES  ಮುಳ್ಳೇರಿಯಾ ಹವ್ಯಕ ಮಂಡಲ ಸಭೆ ಸಂಪನ್ನ.

ಅತಿಥಿಗಳಾಗಿ ಮಾತನಾಡಿದ ಮಂಡಲ ಗುರಿಕ್ಕಾರ ಸತ್ಯ ನಾರಾಯಣ ಭಟ್ ಮಠದಿಂದ ನಡೆಸಲ್ಪಡುವ ಸಮಾಜಿಕ ಕಾಯ್ ಭಾಗವಹಿಸುವ ಅಗತ್ಯ ಗಳನ್ನು, 20.10.2017ರಿಂದ29.10.2017ರವರೆಗೇ ಬಜಕೂಡ್ಲು ಗೋಶಾಲೆ ಯಲ್ಲಿ ನಡೆಸುವ *ಶ್ರೀ ಮದ್ವಲ್ಮೀಕಿ ರಾಮಾಯಣ ಪಾರಾಯಣ*ವಿವರಗಳನ್ನು ನೀಡಿದರು. ಮುಳ್ಳೇರಿಯಾ ಮಂಡಲ ಅಧ್ಯಕ್ಷ ಪ್ರೋ. ಕೃಷ್ಣ ಭಟ್ ತಮ್ಮ ಮಾತುಗಳಲ್ಲಿ ಮಠದ ಯೋಜನೆಗಳನ್ನು ಸಾಕಾರಗೊಳಿಸಲು ಪಾದಾಧಿಕಾರಿಗಳಜವಾಬ್ದಾರಿ ಸಮಾಜ ಬಾಂಧವರು ಸಹಕಾರ ಬಗ್ಗೆ ತಿಳಿಸಿದರು. ಮಂಡಲ ವಿದ್ಯಾರ್ಥಿವಾಹಿನಿ ಕೇಶವಪ್ರಸಾದ ಎಡಕ್ಕಾನ ಶುಭಹಾರೈಸಿದರು, ವಲಯಾಧ್ಯಕ್ಷ ಶ್ರೀ ಯುತ ರಾಮ ಭಟ್ ವಲಯದಿಂದ ಇದುವರೆಗೆ ನಡೆಸಿದ ಕಾರ್ಯಗಳು, ಮನೆ ಮನೆ ಅಭಿಯಾನ ಕಂಡು ಕೊಂಡ ವಿಚರಗಳನ್ನು ತಿಳಿಸಿದರು.
ರುಚಿ-ಶುಚಿಯಾಗಿ ಪ್ರಸಾದ ಭೋಜನ ತಯಾರು ಮಾಡಿದಂತೆ ಶ್ರೀ ಯುತ ಗೋಪಾಲಕೃಷ್ಣ ಭಟ್ ನೆಕ್ಕರಕಾಡು, ಶ್ರೀ ಯುತ ಲಕ್ಷ್ಮಣ ಹೆಬ್ಬಾರ ಶಾವಣಕೆರೆ, *ನೂತನ ಧ್ವಜಸ್ತಂಭ* ಕೋಟ್ಟತಂಹ ಗ್ರಾಮೀಣಿ ಶಂಭು ಹೆಬ್ಬಾರ ಶಾವಣಕೆರೆ ಇವರನ್ನು ಗೌರವಿಸಲಾಯಿತು , ಪ್ರತಿಭ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಪ್ರೋತ್ಸಾಹಕ್ಕಾಗಿ ಶ್ರೀ ಗುರುಗಳ ಭಾವಚಿತ್ರ ಸಹಿತವಾಗಿ ಪ್ರಶಸ್ತಿ ಪತ್ರ ನೀಡಲಾಯಿತು.
ವಲಯ ಜೀವಿಕಾವಿಭಾಗ ಪ್ರಧಾನ ಶ್ರೀಯುತ ಗೋವಿಂದ ಭಟ್ ಎಡಕ್ಕಾನ ಹಳ್ಳಕೊಡ್ಲು ವಂದಿಸಿದರು. ರಾಮತಾರಕ ಜಪ, ಶಾಂತಿ ಮಂತ್ರ, ಧ್ವಜಾವತರಣದೊಂದಿಗೆ ಗುಂಪೆ ವಲಯೋತ್ಸವ ಸಂಪನ್ನವಾಯಿತು.