ಯಲ್ಲಾಪುರ: ತಾಲೂಕಿನಲ್ಲಿ ಪೋಕ್ಸ್‌ ಪ್ರಕರಣ ಮತ್ತೆ ಸದ್ದು ಮಾಡಿದ್ದು ಪಟ್ಟಣದ 3 ನೇ ತರಗತಿ ಓದುವ 8 ವರ್ಷ 8 ತಿಂಗಳ ಬಾಲಕಿಯೋರ್ವಳ ಮೇಲೆ 20 ವರ್ಷದ ಯುವಕನೋರ್ವ ಬಲತ್ಕಾರ ಮಾಡಿ ಯಾರಿಗಾದರು ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆಂದು ಕೆಲದಿನಗಳ ಹಿಂದೆ ಬಾಲಕಿಯ ತಾಯಿ ಯಲ್ಲಾಪುರ ಠಾಣೆಗೆ ದೂರು ಸಲ್ಲಿಸಿರುವ ಘಟನೆ ನಡೆದಿದೆ ಎಂದು ಸ್ಥಳೀಯ ಪತ್ರಿಕೆ ವರದಿಮಾಡಿದೆ.

ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆಯ ಅಕ್ಕನ ಮಗ 20 ವರ್ಷ ವಯಸ್ಸಿನ ಯುವಕ ಕಾಡಿನೊಳಗೆ ಕರೆದುಕೊಂಡು ಹೋಗಿ ಆಮಿಷ ತೋರಿಸಿ ಬಲತ್ಕಾರ ಮಾಡಿ ವಿಷಯ ಎಲ್ಲಿಯಾದರು ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ್ದಾನೆ. ಬಾಲಕಿಯು ಹೆದರಿ ಯಾರಿಗೂ ತಿಳಿಸಿರಲಿಲ್ಲ. ಆದರೆ ಆಕೆಯ ತಾಯಿಗೆ ಮಗಳ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

RELATED ARTICLES  ಪೊಲೀಸರ ಚುರುಕಿನ ಕಾರ್ಯಾಚರಣೆ : ಆರೋಪಿಗಳು ಅರೆಸ್ಟ್

ಈ ವಿಷಯ ಸ್ಥಳೀಯ ಮಹಿಳೆಯರ ಕಿವಿಗೆ ಬಿದ್ದು ಬಾಲಕಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಬಾಲಕಿಯ ತಾಯಿಗೆ ಧೈರ್ಯ ತುಂಬಿ ವಿಷಯವನ್ನು ಯಲ್ಲಾಪುರ ಠಾಣೆಗೆ ಬಾಲಕಿ ಮತ್ತು ಆಕೆಯ ಪೋಷಕರೊಡನೆ ಆಗಮಿಸಿ ಮಾಹಿತಿ ನೀಡಿದ್ದಾರೆ. ಕೃತ್ಯ ಎಸಗಿದ ಯುವಕನ ಮೇಲೆ ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಬಾಲಕಿಯ ತಾಯಿ ದೂರು ದಾಖಲಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

RELATED ARTICLES  ಅಯ್ಯೋ..! ಎಳೆಯ ಶಿಶುವನ್ನು ಬಿಟ್ಟುಹೋದರು.