ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಡಿ.9ರಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ರಾಮನಗರ, ಕೋಲಾರ, ಕೊಡಗು ಮತ್ತು ಚಿಕ್ಕಬಳ್ಳಾಪುರದಲ್ಲಿ ಡಿ.10ರಂದು ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು, ದಾವಣಗೆರೆ, ಚಿತ್ರದುರ್ಗ ಸೇರಿ ದಕ್ಷಿಣ ಒಳನಾಡಿನ ಬಹತೇಕ ಜಿಲ್ಲೆಗಳಲ್ಲಿ ಡಿ.9 ಮತ್ತು ಡಿ.10 ರಂದು ಗುಡುಗು ಸಹಿತ ಜೋರಾಗಿ ಮಳೆ ಬಿದ್ದರೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

RELATED ARTICLES  ನ್ಯೂ ಈಯರ್ ಆಚರಣೆಗೆ ಬರಲಿದೆ ಹೊಸ ಗೈಡ್ ಲೈನ್..!

ಈ ಬಾರಿ ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಿದ್ದಿಲ್ಲ. ಕಳೆದೊಂದು ವಾರದಿಂದ ರಾಜ್ಯಾದ್ಯಂತ ಶೇ.91 ಮಳೆ ಕೊರತೆಯಾಗಿದೆ.

ಈ ಸುದ್ದಿಯನ್ನೂ ಓದಿ

RELATED ARTICLES  ಕುಮಟಾ ನಾದಶ್ರೀಯಲ್ಲಿ "ಭಾವ-ನವನವೀನ" ಕಾರ್ಯಕ್ರಮ ಫೆ. ೦7 ರವಿವಾರ