ಕುಮಟಾ ;ತಾಲೂಕಿನ ಹಳಕಾರ ನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 7 ಫಲಾನುಭವಿಗಳಾದ ಶಿವಿ ಜಟ್ಟಿ ಮುಕ್ರಿ, ಲಕ್ಷ್ಮಿ ಶಾಂತಾರಾಮ ಮುಕ್ರಿ, ಚೈತ್ರಾ ಎಮ್. ಹುಲಸ್ವಾರ, ಕನ್ನೆ ಶಿವು ಮುಕ್ರಿ, ಕಲ್ಪನಾ ನಾಗಪ್ಪ ಗುನಗ, ಮಾರಿ ನಾರಾಯಣ ಮುಕ್ರಿ, ನಾಗಲಕ್ಷ್ಮಿ ಎಸ್. ಗುನಗ ಇವರುಗಳಿಗೆ ಗ್ಯಾಸ್ ಕಿಟ್‍ಗಳ ಜೊತೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಉಚಿತ ಲೈಟರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಈ ಯೋಜನೆಯನ್ನು ಕಡುಬಡವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸಹಕಾರ ನೀಡಿದ ಎಲ್ಲರನ್ನು ಶ್ಲಾಘಿಸಿ, ಈ ಭಾಗದಲ್ಲಿ ಈ ಯೋಜನೆಯ ಯಶಸ್ಸಿಗೆ ವಿಶೇಷವಾಗಿ ಶ್ರಮಿಸಿದ ಸೀತಾರಾಮ ಗುನಗರವರನ್ನು ಅಭಿನಂದಿಸುತ್ತಾ ಈ ನಿಟ್ಟಿನಲ್ಲಿ ಕೈಗೊಳ್ಳಲಾದ ತಮ್ಮ ಕಾರ್ಯವೈಖರಿಯನ್ನು ವಿವರಿಸಿದರು.

RELATED ARTICLES  ಜಿಲ್ಲೆಯ ಮೂವರು ಸಿಪಿಐಗಳ ವರ್ಗಾವಣೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಿನಕರ ಶೆಟ್ಟಿಯವರು ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಶ್ಲಾಘಿಸಿ, ಕೇಂದ್ರಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ನುಡಿದರು. ಇನ್ನೋರ್ವ ಮುಖಂಡರಾದ ಡಾ|| ಜಿ.ಜಿ. ಹೆಗಡೆಯವರು ಈ ಯೋಜನೆಯನ್ನು ಸಫಲಗೊಳಿಸುವಲ್ಲಿ ನಾಗರಾಜ ನಾಯಕ ತೊರ್ಕೆಯವರು ವಹಿಸಿದ ಶ್ರಮವನ್ನು ಅಭಿನಂದಿಸಿ ಬಡವರಿಗೆ ಸಿಗುವಂತಹ ಕೇಂದ್ರದ ಹಲವು ಯೋಜನೆಗಳ ಬಗೆಗೆ ತಿಳಿಸಿದರು. ಸೂರಜ ನಾಯ್ಕ ಸೋನಿಯವರು ಮಾತನಾಡಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಂತಾರಾಮ ಹರಿಕಂತ್ರ, ಗಜಾನನ ಗುನಗ, ದತ್ತಾತ್ರೇಯ ಪಟಗಾರ ಉಪಸ್ಥಿತರಿದ್ದರು. ಸೀತಾರಾಮ ಗುನಗ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

RELATED ARTICLES  ಬಿಜೆಪಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಗರಾಜ ನಾಯಕ ತೊರ್ಕೆ.