ಕುಮಟಾ: ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಆದಿತ್ಯ ವಿವೇಕ ಪಟಗಾರರವರಿಗೆ ಕುಮಟಾ ಕನ್ನಡ ಸಂಘವು ಸಿರಿನೆಲ ರಾಜ್ಯೋತ್ಸವ ಪುರಸ್ಕಾರವನ್ನಿತ್ತು ಗೌರವಿಸಿದೆ.ಕುಮಟಾದ ಪುರಭವನದಲ್ಲಿ ಕುಮಟಾ ಕನ್ನಡ ಸಂಘವು ಆಯೋಜಿಸಿದ “ಜನನುಡಿ”-ಶೀರ್ಷಿಕೆಯಲ್ಲಿನ ಜನಸಾಮಾನ್ಯನ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆದಿತ್ಯ ಪಟಗಾರರವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

RELATED ARTICLES  ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯರಾಗಿರುವ ಆದಿತ್ಯ ಪಟಗಾರರವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕಾನೂನು ಮತ್ತು ಸಂಸದೀಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗಷ್ಟೇ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಮೆಚ್ಚುಗೆಯನ್ನು ಪಡೆದಿದ್ದು, ಸ್ವತಃ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶರವರು ಅವರಿಗೆ ಫಲಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಿದ್ದರು.

RELATED ARTICLES  ಅಘನಾಶಿನಿ ನದಿಗೆ ಬಿದ್ದು ಯುವಕ ಸಾವು.

“ಸಿರಿನೆಲ ರಾಜ್ಯೋತ್ಸವ ಪುರಸ್ಕಾರ”ಕ್ಕೆ ಭಾಜನರಾದ ಆದಿತ್ಯ ಪಟಗಾರರವರು-ಪುರಸ್ಕಾರವು ತನ್ನ ಸಾಧನೆಗೆ ಸಂದ ಗೌರವವೆಂದೆಣಿಸದೆ, ಸಾಧಿಸಲು ನೀಡಿದ ಕನ್ನಡಾಂಬೆಯ ಆಶೀರ್ವಾದದ ಮಂತ್ರಾಕ್ಷತೆಯೆಂದು ಭಾವಿಸುತ್ತೇನೆಂದು ವಿನೀತಭಾವದಿಂದ ನುಡಿದಿದ್ದಲ್ಲದೇ, ಪುರಸ್ಕಾರವು ತನ್ನ ಜವಬ್ದಾರಿಯನ್ನು ಹೆಚ್ಚಿಸಿದೆ ಎಂದಿರುತ್ತಾರೆ.