ಅಂಕೋಲಾ : ಉತ್ತರ ಕನ್ನಡದ ವಿವಿಧ ತಾಲೂಕುಗಳಿಂದ ಒಂದಲ್ಲೊಂದು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇಂದೂ ಸಹ ಅಂತಹುದೇ ಪ್ರಕರಣ ಒಂದು ವರದಿಯಾಗಿದೆ.
ಏಳು ತಿಂಗಳ ಹಿಂದೆ ಅದ್ದೂರಿಯಾಗಿ ವಿವಾಹ ಆಗಿ ನವ ದಾಂಪತ್ಯ ಜೀವನದ ಸವಿ ಅನುಭವಿಸುತ್ತಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಾಲೂಕಿನ ಬೆಳಸೆ ಗ್ರಾಮದ ಹಂದಿಗದ್ದೆಯಲ್ಲಿ ಸಂಭವಿಸಿದ್ದು, ಯಮುನಾ ವಿಘ್ನೇಶ್ವರ ಗೌಡ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಮದುವೆಯಾಗುವುದಕ್ಕೂ ಪೂರ್ವ ತನ್ನ ಶೈಕ್ಷಣಿಕ ಅರ್ಹತೆಯಿಂದ ಪಕ್ಕದ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಯಮುನಾ ಗೌಡ,ತದನಂತರ ಸರ್ಕಾರಿ ಪ್ರೌಢಶಾಲೆ ಶಿಕ್ಷಕನಾಗಿರುವ ವಿಘ್ನೇಶ್ವರ ಗೌಡ ಎಂಬಾತನನ್ನು ಮದುವೆಯಾಗಿ ಸುಃಖ ಸಂಸಾರದ ಕನಸು ಕಾಣುತ್ತಿದ್ದವಳು ಎನ್ನಲಾಗಿದೆ.

RELATED ARTICLES  ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ.

ಈಕೆ ಕಳೆದ 7 ತಿಂಗಳ ಹಿಂದೆ ಬೆಳಸೆಯ ವಿಘ್ನೇಶ್ವರ ಬುಧವಂತ ಗೌಡ ಎಂಬಾತನನ್ನು ಮದುವೆಯಾಗಿದ್ದಳು. ಮೂರು ತಿಂಗಳ ನಂತರ ಗಂಡ ವಿಘ್ನೇಶ್ವರ ಗೌಡ ತನ್ನ ಮೈದುನನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದ್ದು, ಗಂಡನ ನಡವಳಿಕೆ ಬಗ್ಗೆ ಯಮುನಾ ಗೌಡ ಆ ಕುರಿತು ಪ್ರಶ್ನೆ ಮಾಡಿದ್ದಳು ಎನ್ನಲಾಗಿದೆ.

ಅಂದಿನಿಂದ ಗಂಡ , ಮೈದುನ , ಮೈದುನನ ಹೆಂಡತಿ ಮತ್ತು ಅತ್ತೆ ಸೇರಿ ಯಮುನಾಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತ ಬಂದಿದ್ದಾರೆ ಎಂಬ ಆರೋಪ‌ಕೇಳಿ ಬಂದಿದ್ದು, ಗಂಡನ ಮನೆ ಕಿರುಕುಳದ ಬಗ್ಗೆ ತನ್ನ ತವರು ಮನೆಗೆ ಸಹ ತಿಳಿದಿದ್ದಳು ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ತನ್ನ ಗಂಡನ ಮನೆಯ ಮೇಲಿನ ಮಹಡಿಯಲ್ಲಿರುವ ತನ್ನ ಕೊಠಡಿಯ ಕೋಣೆಯಲ್ಲಿ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ತನ್ನ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಮತ್ತು ಕಾಲುಂಗುರವನ್ನು ಬದಿಗೆ ತೆಗೆದಿಟ್ಟಿದ್ದಳು ಎನ್ನಲಾಗಿದೆ.

RELATED ARTICLES  ಸುಟ್ಟು ಕರಕಲಾದ ಟ್ಯಾಂಕರ್ : ಅಸಹಾಯಕ ಸ್ಥಿತಿಯಲ್ಲಿ ಮಾಲಿಕ.

ಕುರಿತು ಮೃತಳ ಸಹೋದರ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು, (ಮೃತಳ ಗಂಡ, ಗಂಡನ ತಮ್ಮ ಮತ್ತು ಅವನ ಹೆಂಡತಿ) ಸೇರಿದಂತೆ ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಗಂಡನ ಅನೈತಿಕ ಸಂಬಂಧ ಕಂಡು – ಕೊರಗಿ ಮನನೊಂದು ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, ಪೊಲೀಸ್ ತನಿಖೆ ನಂತರದಲ್ಲಿ ಸಂಪೂರ್ಣ ಮಾಹಿತಿ ಹೊರ ಬರಬೇಕಿದೆ.