ಶಿರಸಿ : ತಾಲೂಕಿನ ಕುಳವೆಯಲ್ಲಿ ನಡೆದ ಹೊನಲು ಬೆಳಕಿನ ಮುಕ್ತಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಜಡ್ಡಿಗದ್ದೆ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತು. ಕುಳವೆ ಲಕ್ಷಿನರಸಿಂಹ ಗೆಳೆಯರ ಬಳಗ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಕಾರ್ತಿಕೊತ್ಸವದ ಪ್ರಯುಕ್ತವಾಗಿ ಎರಡನೆ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮುಕ್ತ ಪಂದ್ಯಾವಳಿಯಲ್ಲಿ ಒಟ್ಟು 41 ತಂಡಗಳು ಭಾಗವಹಿಸಿದ್ದವು, ಪ್ರತಿ ತಂಡಕ್ಕೆ 800 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು.ಪ್ರಥಮ ಬಹುಮಾನವಾಗಿ 15000 ದ್ವೀತಿಯ ಬಹುಮಾನ 10000 ತೃತೀಯ ಬಹುಮಾನ 6000 ಹಾಗೂ ಚತುರ್ಥ ಬಹುಮಾನ 3000 ಸೇರಿದಂತೆ ಆಕರ್ಷಕ ಟ್ರೋಫಿ ಇಡಲಾಗಿತ್ತು.ಮೂರು ಸುತ್ತಿನ ಆಟದಲ್ಲಿ ಜಡ್ಡಿಗದ್ದೆ ಬಾಯ್ಸ್ ತಂಡ ಹಾಗೂ ಮಾವಿನಸರ ತಂಡಗಳ ನಡುವೆ ನೇರ ಹಣಾಹಣಿಯಲ್ಲಿ ಜಡ್ಡಿಗದ್ದೆ ಬಾಯ್ಸ್ ತಂಡ
ಪ್ರಥಮ ಸ್ಥಾನ ಮುಡಿಗೆರಿಸಿಕೊಂಡರೆ, ಮಾವಿನಸರ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಇನ್ನೂ ತೃತೀಯ ಸ್ಥಾನವನ್ನು ಮಳಲಗಾಂವ್, ಹಾಗೂ ನೆರೆಬೈಲ್ ತಂಡ ಚತುರ್ಥ ಬಹುಮಾನ ಪಡೆಯುವಲ್ಲಿ ಯಶಸ್ವಿಯಾದವು.

RELATED ARTICLES  ಬಿಟ್ ಕಾಯಿನ್ ಬಗ್ಗೆ ಮಾಹಿತಿ ಇಲ್ಲದೇ ಚರ್ಚೆಯಾಗುತ್ತಿದೆ : ಬಿ.ಎಸ್. ಯಡಿಯೂರಪ್ಪ

ಈ ಸುದ್ದಿ ಓದಿ.

ಕಾರ್ಯಕ್ರಮದ ಸಂಘಟಕರು ಜಯಗಳಿಸಿದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಿದರು.ಇದರ ಜೊತೆಯಲ್ಲಿ ಕುಳವೆ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಕ್ರೀಡಾಕೂಟ ಆಯೋಜಿಸಿ, ಗೆದ್ದವರಿಗೆ ಪ್ರಶಸ್ತಿ ಪ್ರತ್ರ ವಿತರಿಸಲಾಯಿತು.

RELATED ARTICLES  ಮೊಡರ್ನ ಎಜ್ಯುಕೇಶನ್ ಶಾಲೆಯಲ್ಲಿ ಆರ್ಟ್ಸ್ ಸರ್ಕಲ್