ಗೋಕರ್ಣ : ಯಾವುದೋ ಒಂದು ವಿಷಯವನ್ನು ಮನಸ್ಸಿಗೆ ಹೆಚ್ಚಿಕೊಂಡು ಕುಮಟಾದ ವ್ಯಕ್ತಿಯೋರ್ವರು ಗೋಕರ್ಣದಲ್ಲಿ ಮದ್ಯದ ಸೇವಿಸುವುದರ ಜೊತೆಗೆ ವಿಷಯವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ವಸಂತ ದತ್ತಾತ್ರೇಯ ಭಟ್ ಕುಮಟಾದ ಮದ್ಗುಣಿ ಮೂಲದವರಾಗಿದ್ದು ತಮ್ಮ ವಯಕ್ತಿಕ ವಿಷಯಕ್ಕೆ ಮನನೊಂದು ವಿಪರೀತ ಮದ್ಯದ ಜೊತೆ ವಿಷವನ್ನು ಸೇವಿಸಿದಾಗ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

RELATED ARTICLES  Helpful information for Better Table Meetings

ಕೂಡಲೇ ವಿಷಯ ಗೋಕರ್ಣ ಜೀವ ರಕ್ಷಕೆ ಕರೆಮಾಡಿ ವಿಷಯ ತಿಳಿಸುತಿದ್ದಂತೆ ಸ್ಥಳಕ್ಕೆ ತೆರಳಿ ಸಮುದ್ರದ ದಢದಲ್ಲಿ ಅಸ್ವಸ್ಥನಾಗಿ ಬಿದ್ದಿದಂತ ವ್ಯಕ್ತಿಯನ್ನು,
ಗೋಕರ್ಣ ಪೊಲೀಸ್ ರ ಹಾಗು ಸ್ಥಳಿಯ ಹೊಟೆಲ್ ಮಾಲಿಕರು ಮತ್ತು ಸಾಮಾಜಿಕ ಕಾರ್ಯಕರ್ತ ವಿಶಾಲ ನಾಯಕ ಅವರ ಸಹಾಯದಿಂದ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಯನ್ನು ನೀಡಿ ಅಲ್ಲಿಂದ ಕುಮಟಾದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

RELATED ARTICLES  ಸರಕಾರದ ವಿವಿಧ ಧೋರಣೆ ಖಂಡಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಕೆ