ಅಂಕೋಲಾ: ಅಂಕೋಲಾ ತಾಲೂಕಿನ ಮಠಾಕೇರಿ ಕ್ರಾಸ್ ಹತ್ತಿರ ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ್ ನಾಯ್ಕರವರ ಮಾಲೀಕತ್ವದ 2 ಬಾವಿಗಳಲ್ಲಿ ಕಳೆದ 3 ದಿನಗಳಿಂದ ಬಾವಿಯ ನೀರು ಡೀಸೆಲ್ ವಾಸನೆ ಬರಲಾರಂಭಿಸಿದೆ ಎಂದು ತಿಳಿದುಬಂದಿದೆ.
ಈ ನೀರನ್ನು ಕುಡಿಯಲು ಸಾಧ್ಯವಾಗದೇ ಇರುವುದರಿಂದ ಈ ಬಾವಿಗಳ ಮಾಲೀಕರು ಚಿಂತೆಗೀಡಾಗಿದ್ದಾರೆ. ಕಳೆದ ವರ್ಷವೂ ಪಟ್ಟಣದ ಒಂದು ಪೆಟ್ರೋಲ್ ಪಂಪ್ ನಿಂದ ಡೀಸೆಲ್ ಬಾವಿಗೆ ಸೇರಿ ನೀರು ಕುಡಿಯಲಾರದಂತಾಗಿತ್ತು. ಈಗ ಮತ್ತೆ ಮಠಾಕೇರಿ ಬಾವಿಯಲ್ಲಿ ಇದೇ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಅಲ್ಲದೇ ಇದೇ ಬಾವಿಗಳ ನೀರನ್ನು ಕುಡಿಯಲು
ಅವಲಂಬಿಸಿರುವ ಹಲವರು ಆತಂಕ ಪಡುವಂತಾಗಿದೆ. ಈ ಬಾವಿಗಳ ಹತ್ತಿರದಲ್ಲಿರುವ ಡೀಸೆಲ್ ಪಂಪ್ ನಿಂದ ಬಾವಿಗಳಿಗೆ ಡೀಸೆಲ್ ಹರಿದು ಬಂದಿರುವ ಸಾಧ್ಯತೆಯಿದೆ
ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಎನ್.ಎಮ್.ಮೆಸ್ತಾ, ಆಹಾರ ನಿರೀಕ್ಷಕ ನವೀನ ನಾಯ್ಕ, ಪುರಸಭಾ ನೀರು ಸರಬರಾಜು ಅಧಿಕಾರಿ ಆನಂದ ನಾಯ್ಕ ಭೇಟಿ ನೀಡಿ ಬಾವಿಯ ನೀರನ್ನು ಪರೀಕ್ಷಾರ್ಥವಾಗಿ ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಗಳನ್ನು ಓದಿ.