ಕುಮಟಾ: ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿಯವರ ಭಗವದ್ಗೀತಾ ಅಭಿಯಾನದ ನಿಮಿತ್ತ ನಡೆದ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.


ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರ ವಿಠ್ಠಲ ವಿಷ್ಣು ಶಾನಭಾಗ ಹಾಗೂ ಕುಮಾರಿ ಅದಿತಿ ಪ್ರಕಾಶ ವೈದ್ಯ ಇವರ ತಂಡವು ಭಗವದ್ಗೀತಾ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಹೊಸ ಕೀರ್ತಿಯನ್ನು ಸ್ಥಾಪಿಸಿದ್ದಾರೆ. ಭಗವದ್ಗೀತಾ ಶ್ಲೋಕ ಪಠಣದಲ್ಲಿ ಕುಮಾರಿ ಶ್ರೇಯಾ ಗಿರೀಶ ಹೆಬ್ಬಾರ ಇವಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

RELATED ARTICLES  ಇಂದಿನ(ದಿ-24/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.


ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಹಾಗೂ ಪಾಲಕರು ಅಭಿನಂದಿಸಿದ್ದಾರೆ.

RELATED ARTICLES  ಶ್ರೀಪರಿವಾರದ ಭಿಕ್ಷಾಸೇವೆ: ಐವರಿಗೆ ಸಾಧಕ ಸನ್ಮಾನಗುರಿ ಸಾಧನೆಗೆ ಶ್ರೀ ಪರಿವಾರ ಸೋಪಾನ: ರಾಘವೇಶ್ವರ ಶ್ರೀ