“ಏಕ್ ಭಾರತ್ ಶ್ರೇಷ್ಠ ಭಾರತ್” ಧ್ಯೇಯವಾಕ್ಯದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹೊರಟಿರುವ ರೋಲರ್ ಸ್ಕೇಟಿಂಗ್ ಯಾತ್ರೆಯು ಇಂದು ಮಧ್ಯಾಹ್ನ 2ಗಂಟೆಗೆ ಕುಮಟಾವನ್ನು ತಲುಪಿತು. ಈ ಸಂದರ್ಭದಲ್ಲಿ ಪಟ್ಟಣದ ಗಿಬ್ ಸರ್ಕಲ್ ನಲ್ಲಿ ಸ್ಕೇಟಿಂಗ್ ಯಾತ್ರಿಗಳಿಗೆ ಸ್ವಾಗತಿಸಿ, ಪುಷ್ಪಾಭಿಶೇಕ ಅರ್ಪಿಸಿ ಗೌರವಿಸಲಾಯಿತು.

ಭಾರತದಲ್ಲಿರುವ ಅಪೌಷ್ಟಿಕತೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಈ ತಂಡ ಸಂಚರಿಸುತ್ತಿದೆ. ಶಾಸಕರಾದ ದಿನಕರ ಶೆಟ್ಟಿ ಕುಮಟಾದಲ್ಲಿ ತಂಡವನ್ನು ಸ್ವಾಗತಿಸಿದರು.

RELATED ARTICLES  ವೀಲ್ ಛೇರ್ ಮತ್ತು ಡಸ್ಟ ಬೀನ್ ವಿತರಣೆ.

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷ ಶ್ರೀ ವೆಂಕಟೇಶ ನಾಯಕ, ಮಾನ್ಯ ಶಾಸಕ ಶ್ರೀ ದಿನಕರ ಶೆಟ್ಟಿ, ಕುಮಟಾ ಮಂಡಲ ಅಧ್ಯಕ್ಷ ಶ್ರೀ ಹೇಮಂತಕುಮಾರ ಗಾಂವಕರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ|| ಸುರೇಶ ಹೆಗಡೆ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು- ಕಾರ್ಯಕರ್ತರು, ಸಂಘದ ಸ್ವಯಂ ಸೇವಕರು, ಎ.ಬಿ.ವಿ.ಪಿ.ಯವರು ಇದ್ದರು.

RELATED ARTICLES  ಬ್ರಹ್ಮೂರಿನಲ್ಲಿ ಬಿಜೆಪಿ ಬೂತ್ ಕಮಿಟಿ ಹಾಗೂ ಪೇಜ್ ಪ್ರಮುಖರ ಸಭೆ ಯಶಸ್ವಿ