ಶಿರಸಿ : ಹೆಸರಾಂತ ಹವ್ಯಾಸಿ ರಂಗಭೂಮಿ ಕಲಾವಿದ, ಕೃಷಿಕ ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ತುಡಗುಣಿ ಇದರ ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತುಡುಗುಣಿಯ ವಿ ಜಿ ಭಟ್ (60) ನಿಧನರಾದರು. ಗೋಳಿ ನಾಟಕಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ತುಡಗುಣಿ ಕೃಷ್ಣ ಎಂದೇ ಹೆಸರುವಾಸಿಯಾಗಿದ್ದ ಇವರು, ಸದಾ ಸಮಾಜಮುಖಿ
ವ್ಯಕ್ತಿತ್ವ ಹೊಂದಿದವರಾಗಿದ್ದರು.

RELATED ARTICLES  'ಸಹೃದಯಿ' ಪುಸ್ತಕ ಲೋಕಾರ್ಪಣೆ ಸಮಾರಂಭ ಇಂದು

ತುಡಗುಣಿ ಯುವಕ ಸಂಘದ ಹುಟ್ಟು ಬೆಳವಣಿಗೆಯಲ್ಲಿ ಹಿರಿ ಹಿರಿ ಕಿರಿಯರೊಂದಿಗೆ ಹೆಗಲು ಕೊಟ್ಟವರು. ಅನೇಕ ವರ್ಷಗಳಿಂದ ಯಕ್ಷಗಾನ ತಾಳಮದ್ದಲೆಯನ್ನು ಹಿರಿಯರಂತೇ ಕುಟುಬಸ್ತರೊಡಗೂಡಿ ನಿರಂತರವಾಗಿ ವಿಜಯದಶಮಿಯಂದು ಸಂಘಟಿಸಿಕೊಂಡು ಬಂದವರು,ತುಡುಗುಣಿ ಕುಟುಂಬದ ಅರುಂಧತಿ ಮತ್ತು
ಗೋವಿಂದ ಮಾಬೇಶ್ವರ ಭಟ್ಟರ ದ್ವಿತೀಯ ಪುತ್ರರಾಗಿದ್ದರು. ಅವರು ಪತ್ನಿ ಪುತ್ರಿ ತಾಯಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

RELATED ARTICLES  ಬೇಡ್ತಿ ನದಿಯಿಂದ ಕೆರೆಗಳನ್ನು ತುಂಬಿಸಿ – ಮುಖ್ಯಮಂತ್ರಿಗೆ ಶಾಸಕ ಹೆಬ್ಬಾರ್ ಮನವಿ