ಕುಮಟಾ : ಹೆತ್ತ ತಾಯಿಯನ್ನೇ ಬರಬರವಾಗಿ ಕೊಲೆ ಮಾಡಿದ ಮಗನ ಸುದ್ದಿ ಇದೀಗ ಕುಮಟಾ ತಾಲೂಕಿನಲ್ಲಿ ಸದ್ದು ಮಾಡುತ್ತಿದೆ. ಈ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಡ ಎಂಬಲ್ಲಿ ನಡೆದಿದೆ. ಕುಡಿತದ ಚಟಕ್ಕೆ ಮಗ ದಾಸನಾಗಿದ್ದ ಎಂದು ತಿಳಿದು ಬಂದಿದ್ದು, ಇದೇ ಕಾರಣವೇ ತಾಯಿಯ ಕೊಲೆಗೆ ಕಾರಣ ಎನ್ನಲಾಗಿದೆ.

ಮದ್ಯ ಕುಡಿಯಲು ಹಣ ಕೇಳಿದ್ದಕ್ಕೆ ಕೊಡದ ತಾಯಿಯನ್ನೇ ಕಟುಕ ಮಗನೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಸುದ್ದಿ ಲಭ್ಯವಾಗಿದೆ. ಗೀತಾ ಭಟ್ (60) ಕೊಲೆಯಾದ ದುರ್ದೈವಿ. ಮಧುಕರ್ ಭಟ್, ತಾಯಿ ಹತ್ಯೆ ಮಾಡಿರುವ ಮಗ ಎನ್ನಲಾಗಿದೆ.

RELATED ARTICLES  ಜಿಯೋ, ಏರ್ ಟೆಲ್ ನಂತರ ಬಿಎಸ್ಎನ್ಎಲ್ ನಿಂದ ಅಗ್ಗದ ಫೋನ್!

ಕುಡಿತದ ಚಟಕ್ಕೆ ದಾಸನಾಗಿದ್ದ ಮಧುಕರ್, ತಾಯಿಗೆ ಮದ್ಯ ಕುಡಿಯೋದಕ್ಕೆ ಹಣ ನೀಡುವಂತೆ ದಿನವೂ ಪೀಡಿಸುತ್ತಿದ್ದ. ಹೀಗೆ ಇಂದು ಕೂಡ ಪೀಡಿಸಿ ಜಗಳ ನಡೆಸಿದ್ದು, ಹಣ ನೀಡದ್ದಕ್ಕೆ ಸಿಟ್ಟಿನಲ್ಲಿ ತಾಯಿಯ ತಲೆಯ ಮೇಲೆ ರೀಪಿನ ತುಂಡು ಹಾಗೂ ಇತರ ಕಟ್ಟಿಗೆ ದೊಣ್ಣೆಯಿಂದ ಹೊಡೆದಿದ್ದಾನೆ. ದೊಣ್ಣೆಯ ಏಟಿಗೆ ರಕ್ತಸ್ರಾವವಾಗಿ ಗೀತಾ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಮಗನಿಗೆ ತಂದೆ ವಿಶ್ವೇಶ್ವರ ಭಟ್ ಕೂಡ ಬೆಂಬಲ
ನೀಡುತ್ತಿದ್ದ ಎಂದು ಊರಿನವರು ದೂರಿದ್ದು, ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತಂದೆ-ಮಗ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಪೊಲೀಸ್ ತನಿಖೆಯ ನಂತರದಲ್ಲಿ ಸತ್ಯಾಸತ್ಯತೆ ಹಾಗೂ ಸಂಪೂರ್ಣ ವಿವರ ತಿಳಿದು ಬರಬೇಕಿದೆ.

RELATED ARTICLES  ಒಂಟಿತನವು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಬಹುದು!

ಈ ಸುದ್ದಿಗಳನ್ನೂ ಓದಿ.