ಅಂಕೋಲಾ: ಶ್ರೀ ನಾರಾಯಣಗುರು ವೇದಿಕೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಪುರಸ್ಕಾರ ನೀಡಲಾಗುವುದು.

RELATED ARTICLES  ಹೀಗೆ ಮಾಡಿದ್ರೆ ನಿಮ್ಮ ಖಾತೆಯ ಹಣ ಮಾಯವಾಗಬಹುದು ಹುಷಾರ್..!


ಅರ್ಜಿ ಸಲ್ಲಿಸುವವರು ಯಾವುದೇ ತಾಲೂಕಿನಲ್ಲಿ ವ್ಯಾಸಂಗ ಮಾಡಿದ್ದರೂ ಅವರ ಆಧಾರ ಕಾರ್ಡ್ ಅಂಕೋಲಾ ವಿಳಾಸದಲ್ಲಿರುವುದು ಕಡ್ಡಾಯ. ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90, ಪಿ.ಯು.ಸಿ. ಹಾಗೂ ಪದವಿಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು ಫೋಟೋ, ಮೊಬೈಲ್ ನಂಬರ್, ಆಧಾರ ಕಾರ್ಡ್, ದೃಢೀಕೃತ ಅಂಕಪಟ್ಟಿಯನ್ನು ‘ನಾಗರಾಜ ಮಂಜಗುಣಿ, ಅಧ್ಯಕ್ಷ, ಶ್ರೀ ನಾರಾಯಣಗುರು ವೇದಿಕೆಯ, ಆಮಂತ್ರಣ ಗ್ರಾಫಿಕ್ಸ್, ಕೆ.ಸಿ. ರಸ್ತೆ, ಅಂಕೋಲಾ, ಮೊ.: 9844384013, ಮಂಜುನಾಥ ಕೆ. ನಾಯ್ಕ, ಕಾರ್ಯದರ್ಶಿ, ಮೊ.: 9901285838 ಗೆ ಡಿಸೆಂಬರ್ 20ರೊಳಗಾಗಿ ಸಲ್ಲಿಸಬಹುದಾಗಿದೆ.

RELATED ARTICLES  ಬೇಸಿಗೆ ರಜೆ ವಿಸ್ತರಿಸಿ, SSLC ವಾರ್ಷಿಕ ಪರೀಕ್ಷೆ-2ನ್ನು ಒಂದು ವಾರಗಳ ಕಾಲ ಮುಂದೂಡಿ ಸರಕಾರದ ಆದೇಶ .