ಕುಮಟಾ: ತಾಲೂಕಿನ ಮೂರೂರಿನ ಮುಸ್ಗುಪ್ಪೆಯಲ್ಲಿ ಹಳೆಕಾಲದ ಗುಹೆಯೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಮತ್ತು ಅಚ್ಚರಿಕೆ ಕಾರಣವಾಗಿದೆ.
ತಾಲೂಕಿನ ಮೂರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಸ್ಗುಪ್ಪೆಯ ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿರುವಾಗ ಅಪರೂಪದ ಹಳೆ ಕಾಲದ ಗುಹೆಯೊಂದು ಪತ್ತೆಯಾಗಿದೆ. ಮೊದ ಮೊದಲು ಭೂಮಿಯ ಪೊಳ್ಳು ಪದರವಿರುವ ಜಾಗವಿರಬಹುದೆಂದು ಅಗೆಯುತ್ತ ಹೋದಂತೆ ಗುಹೆಯ ಆಳ ಜಾಸ್ತಿಯಾಗುತ್ತ ಹೋಗಿದೆ.

ಸುಮಾರು 8 ಅಡಿ ಆಳದಲ್ಲಿ ಗುಹೆ ಪತ್ತೆಯಾಗಿದೆ. ಆದರೆ ಇನ್ನು ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಸ್ಥಳೀಯರ ಪ್ರಕಾರ ಈ ಗುಹೆ ಮಿರ್ಜಾನ್ ಕೋಟೆಗೆ ಸಂಪರ್ಕ ಹೊಂದಿರಬಹುದೆ0ದು ತಿಳಿಸಿದ್ದಾರೆ.

RELATED ARTICLES  ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದಿನಕರ ಪ್ರಾಥಮಿಕ ಶಾಲೆ, ಧಾರೇಶ್ವರದ ವಿದ್ಯಾರ್ಥಿ ಗಿರೀಶ್ ಜೆ. ಪಟಗಾರ!


ಮಿರ್ಜಾನ್ ಕೋಟೆಯನ್ನು ನಿರ್ಮಿಸಿದ ಆದಿಲ್ ಶಾಹಿಗಳ ಪಾಳೆಗಾರರು ಕೋಟೆ ಮೇಲೆ ಶತ್ರುಗಳ ದಾಳಿಯಾದರೆ ಪಾಳೆಗಾರರು ಸುಲಭ ತಪ್ಪಿಸಿಕೊಳ್ಳಲು ಕೆಲ ಗುಪ್ತ ಸುರಂಗಳನ್ನು ಕೊರೆಯಿಸಿದ್ದರಂತೆ. ಈ ಗುಪ್ತ ದ್ವಾರಗಳು ಕೋಟೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿವೆ ಎಂದು ಹೇಳಲಾಗುತ್ತದೆ. ಕೆಲ ವರ್ಷಗಳ ಹಿಂದೆ ಚುತುಷ್ಪಥ ಕಾಮಗಾರಿಗಾಗಿ ಮಿರ್ಜಾನ್ ದುಂಡ್ಕುಳಿಯ ಮಧ್ಯ ಭಾಗದಲ್ಲಿ ಗುಡ್ಡವನ್ನು ಕೊರೆಯುವಾಗ ಅಲ್ಲಿಯೂ ಬೃಹತ್ ಸುರಂಗವೊOದು ಪತ್ತೆಯಾಗಿತ್ತು.

RELATED ARTICLES  ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಎನ್ನುವದು ಅತೀ ಅವಶ್ಯಕ

ಆಗಲೂ ಅಲ್ಲಿನ ಸ್ಥಳೀಯರು ಇದು ಮಿರ್ಜಾನ್ ಕೋಟೆಯನ್ನು ಸಂಪರ್ಕಿಸುವ ಗುಹೆ ಎಂದೇ ವಿಶ್ಲೇಷಿಸಲಾಗಿತ್ತು. ಬಳಿಕ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಗುಹೆ ಅಲ್ಲ. ಭೂಮಿಯಲ್ಲಿ ಉಂಟಾಗುವ ಪೊಳ್ಳು ಪದರ ಎಂದು ಸ್ಪಷ್ಟಪಡಿಸಲಾಗಿತ್ತು. ಅಂತೆಯೇ ಮುಸ್ಗುಪ್ಪೆಯಲ್ಲಿ ಪತ್ತೆಯಾದ ಗುಹೆಯ ಬಗ್ಗೆಯೂ ಸಂಬ0ಧಪಟ್ಟ ತಜ್ಞರ ತಂಡ ಪರಿಶೀಲಿಸಿದ ಬಳಿಕವೇ ಸತ್ಯಾಸತ್ಯತೆ ತಿಳಿದುಬರಬೇಕಿದೆ.