ಮುಂಡಗೋಡ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಮುಂಡಗೋಡದ ಬಾಚಣಕಿ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ಹುಬ್ಬಳ್ಳಿಯ ಆನಂದ್ ನಂಗರದ ಸುರೇಖಾ ಪರಂಡಿಕರ್ ಮೃತರು. ಇವರು ಕಳೆದ ಐದು ದಿನಗಳ ಹಿಂದೆ ತಮ್ಮ ತಾಯಿಯ ಮನೆಯಾದ ಮುಂಡಗೋಡದ ಶಿಡ್ಲಗುಂಡಿಗೆಂದು ಹುಬ್ಬಳ್ಳಿಯಿಂದ ಹೊರಟಿದ್ದರು. ಆದರೆ ಅಲ್ಲಿಗೂ ತಲುಪದೆ, ವಾಪಸ್ಸು ಹುಬ್ಬಳ್ಳಿಗೂ ಬಾರದೆ ಕಾಣೆಯಾಗಿದ್ದರು.

RELATED ARTICLES  ಶ್ರೀ ದಿವಾಕರ ಸ್ವಾಮೀಜಿಗೆ ಗೋಕರ್ಣ ಗೌರವ

ಈ ಬಗ್ಗೆ ಕುಟುಂಬಸ್ಥರು ಸಾಕಷ್ಟು ಹುಡುಕಾಡಿ, ಕೊನೆಗೆ ಹುಬ್ಬಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಬುಧವಾರ ಮುಂಡಗೋಡ- ಹುಬ್ಬಳ್ಳಿ ರಸ್ತೆಯ ಬಾಚಣಕಿ ಜಲಾಶಯದ ಹಿನ್ನೀರಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದು, ಕುಟುಂಬಸ್ಥರು ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ.

RELATED ARTICLES  ಯುವಕನ ಮರ್ಮಾಂಗಕ್ಕೆ ಕಚ್ಚಿದ ಹಾವು : ಯುವಕನಿಗೆ ಚಿಕಿತ್ಸೆ.