ಅಂಕೋಲಾ: ವಂಶಪಾರಂಪರವಾಗಿ ಬಂದ ನಾಟಿವೈದ್ಯಕೀಯ ಪದ್ಧತಿಯನ್ನು ರೂಢಿಸಿಕೊಂಡಿದ್ದ ನಾಟಿವೈದ್ಯಕೀಯ ಪದ್ದತಿ ಮೂಲಕ ಹಲವಾರು ರೋಗಿಗಳನ್ನು ಗುಣಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದ ಈಶ್ವರ ವೆಂಕಟ ಗೌಡ (43) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈಶ್ವರ ಗೌಡ ಅಲೋಪತಿಕ ಔಷಧಿಗಳಿಂದ ಗುಣವಾಗದ ಕಾಯಿಲೆಗಳು ಇವರ ಔಷಧಿಯಿಂದ ಗುಣವಾಗಿ ಈಗಲೂ ಹಲವರು ಇವರನ್ನು ನೆನೆಸುತ್ತಾರೆ.

RELATED ARTICLES  ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಕೆ : ಎಚ್ಚರಿಕೆ ನೀಡಿದ ಅಧಿಕಾರಿಗಳು.

ಇವರ ಅಜ್ಜ ತಿಮ್ಮದಾಸ ಗೌಡ ಪ್ರಸಿದ್ಧ ನಾಟಿವೈದ್ಯರಾಗಿದ್ದರು. ಹಾಲಕ್ಕಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿ, ವಾಸರಕುದ್ರಿಗೆ ಸರಕಾರಿ ಹಿ.ಪ್ರಾ.ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಲ್ಲರೊಂದಿಗೆ ಸರಳತೆ ಮತ್ತು ಸಜ್ಜನಿಕೆಯಿಂದ ಬಾಳುತ್ತಾ ಕುಟುಂಬದವರಿಗೂ ಆಶ್ರಯದಾತರಾಗಿದ್ದರು.

RELATED ARTICLES  ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ

ಮೃತರು ಪತ್ನಿ, ಓರ್ವ ಮಗ, ಓರ್ವಳು ಮಗಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.