ಕುಮಟಾ : ಉತ್ತರ ಕನ್ನಡ ಜಿಲ್ಲಾ  ಸಹಕಾರಿ ಯೂನಿಯನ್ ನಿ. ಕುಮಟಾ ಇವರು  ದಿನಾಂಕ  05/12/2022   ಸೋಮವಾರದಂದು, ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿಯಲ್ಲಿ ಏರ್ಪಡಿಸಿದ, ಜಿಲ್ಲಾ ಮಟ್ಟದ  ಚರ್ಚಾ  ಸ್ಪರ್ಧೆಯಲ್ಲಿ ನಮ್ಮ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ  ಭಂಡಾರ್ಕರ್  ಸರಸ್ವತಿ ಪದವಿ ಪೂರ್ವ  ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಕುಮಾರಿ ಅಕ್ಷತಾ  ಶಾನಭಾಗ ದ್ವಿತೀಯ ಸ್ಥಾನವನ್ನು ಹಾಗೂ ಕುಮಾರಿ ಗ್ರೀಷ್ಮಾ ಗಾವಡಿ  ತ್ರತೀಯ ಸ್ಥಾನವನ್ನು  ಪಡೆದು ಕಾಲೇಜಿಗೆ  ಕೀರ್ತಿಯನ್ನು ತಂದಿರುತ್ತಾರೆ.

RELATED ARTICLES  ಅಕ್ರಮ ಗಾಂಜಾ ಮಾರಾಟ : ಓರ್ವನ ಬಂಧನ


ಇವರ ಈ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಗೌರವಾನ್ವಿತ ಆಡಳಿತ ಮಂಡಳಿಯವರು, ಪ್ರಾಂಶುಪಾಲರಾದ ಶ್ರೀ ಕಿರಣ್ ಭಟ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ  ಶ್ರೀ ಗುರುರಾಜ ಶೆಟ್ಟಿ  ಮತ್ತು  ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

RELATED ARTICLES  Software Development Cost