ಕುಮಟಾ: ನಗರದ ಪೋಸ್ಟಲ್ ಕಾಲೋನಿ ಸಮೀಪದ ನಿವಾಸಿ ನಿವೃತ್ತ ತಹಸೀಲ್ದಾರ ಮೇಘರಾಜ್ ನಾಯ್ಕ (62) ಗುರುವಾರ ಮುಂಜಾನೆ ನಿಧನರಾದರು. ಅವರು ಕುಮಟಾದಲ್ಲಿ ತಹಸೀಲ್ದಾರ ಆಗಿದ್ದಾಗ ನೆರೆ ಹಾವಳಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು.
ಮೂಲತಃ ಕುಮಟಾ ತಾಲೂಕಿನ ಕಾಗಾಲ ಗ್ರಾಮದವರಾಗಿದ್ದ ಮೇಘರಾಜ ನಾಯ್ಕ ಅವರು ವಿಧಾನ ಸೌಧ, ವಿಜಯಪುರ ಜಿಲ್ಲೆಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಕುಮಟಾ ಪುರಸಭೆ ಮುಖ್ಯಧಿಕಾರಿಯಾಗಿಯೂ ಕೆಲಸ ಮಾಡಿದ್ದರು.
ನಿವೃತ್ತಿ ನಂತರ ಕೊರೊನಾ ಕಾಯಿಲೆಗೆ ತುತ್ತಾಗಿ ನಂತರ ಗುಣಮುಖರಾಗಿದ್ದರು. ಇತ್ತೀಚಿಗೆ ಆರೋಗ್ಯದಲ್ಲಿ ಪುನಃ ತೊಂದರೆ ಉಂಟಾಗಿ ಬೆಂಗಳೂರು ಆಸ್ಪತ್ರೆಯಲ್ಲಿ ಪಡೆಯುತ್ತಿದ್ದರು. ಬುಧವಾರ ಮುಂಜಾನೆ ಅವರಿಗೆ ಹೃದಯದ ತೊಂದರೆ ಕಾಣಿಸಿಕೊಂಡಿದ್ದು, ನಂತರ ಅವರನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು ಎಂದು ತಿಳಿದು ಬಂದಿದೆ.