ಯಲ್ಲಾಪುರ: ತಾಲೂಕಿನ ಮೆಣಸುಪಾಲ ಮತ್ತು ಜೋಯಿಡಾ ನಾಗಝರಿ ತಾಲೂಕಿನ ಮಧ್ಯದಲ್ಲಿರುವ ಕಾಳಿನದಿಯಲ್ಲಿ ಮೀನು ಹಿಡಿಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದ್ದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಆನಗೋಡ ಗ್ರಾಮದ ಹಸರಪಾಲ ನಿವಾಸಿ ಸಾವೇರ ಪೆದ್ರು ವಾಜ್ (37) ಎಂಬ ಯುವಕನೆ ಮೃತ ಪಟ್ಟವನಾಗಿದ್ದು ಈತ ತನ್ನ ಸ್ನೇಹಿತರ ಜೊತೆಯಲ್ಲಿ ಮೀನು ಹಿಡಿಯಲು ತೆರಳಿದವನು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.

RELATED ARTICLES  ಕೊಲೆಯಲ್ಲಿ ಅಂತ್ಯವಾದ ಆಸ್ತಿ ಜಗಳ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.

ಈತನ ಮೃತದೇಹ ಮಾರನೆದಿನ ದೊರಕಿದ್ದು ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿ, ದಾಖಲಿಸಿಕೊಂಡ ದೂರಿನ ಅನ್ವಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES  ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆ

ಈ ಸುದ್ದಿಗಳನ್ನೂ ಓದಿ.