ಕಾರವಾರ : ಬೆಂಗಳೂರು ಕಾರವಾರ ನಡುವೆ ವಿಪರೀತವಾಗುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿ ಮಾಡಿದ್ದ ಮನವಿಯನ್ನು ಪರಿಗಣಿಸಿ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿದ್ದ ಸೂಚನೆಗೆ ನೈರುತ್ಯ ರೈಲ್ವೆ ಸ್ಪಂದಿಸಿದ್ದು, ಚಳಿಗಾಲದ ವಿಶೇಷ ರೈಲು ಡಿ.10 ರ ರಾತ್ರಿ 11.50 ಕ್ಕೆ ಯಶವಂತಪುರ ನಿಲ್ದಾಣದಿಂದ ಉತ್ತರ ಕನ್ನಡದ ಮುರುಡೇಶ್ವರ ನಿಲ್ದಾಣದ ಕಡೆಗೆ ಹೊರಡಲಿದೆ. ಈ ರೈಲು ಪ್ರತಿ ಶನಿವಾರ ಜನವರಿ 30 ರವರೆಗೆ ಓಡಲಿದೆ. ಕಾರವಾರ ಉಡುಪಿ ಭಾಗದ ದಶಕದ ಬೇಡಿಕೆಯಾಗಿದ್ದ ಪಡೀಲ್ ಬೈಪಾಸ್ ಮಾರ್ಗದ ನೇರ ರೈಲು ಸೇವೆ ಇದಾಗಿದ್ದು ಈ ಮಾರ್ಗದಲ್ಲಿ ಓಡುವ ಎರಡನೇ ರೈಲಾಗಿ ಇದು ಸಂಚರಿಸಲಿದೆ.
ನಿತ್ಯ ಓಡುವ ಪಡೀಲ್ ಬೈಪಾಸ್ ಮಾರ್ಗದ ರೈಲು ಬಾರೀ ಜನಪ್ರಿಯವಾಗಿದ್ದು ಅದರಲ್ಲಿ ಟಿಕೇಟ್ ಸಿಗುವುದೇ ಅಸಾಧ್ಯ ಎನ್ನುವ ಸ್ಥಿತಿ ಇದೆ. ಈ ಹಿಂದೆ ಮಂಗಳೂರು ಸೆಂಟ್ರಲ್ ತಲುಪಿ ಸುತ್ತಾಡಿ ಬರುತಿದ್ದ ರೈಲು ಪ್ರಯಾಣಿಕರ ಗಂಟೆಗಟ್ಟಲೆ ಸಮಯವನ್ನು ಮಂಗಳೂರು ನಗರ ಭಾಗದಲ್ಲಿ ಹಾಳು ಮಾಡುತಿದ್ದ ಹಿನ್ನೆಲೆಯಲ್ಲಿ ಕರಾವಳಿಗರು ಹೊಸ ಪಡೀಲ್ ಬೈಪಾಸ್ ನೇರ ಮಾರ್ಗದ ರೈಲಿಗಾಗಿ ಹೋರಾಡಿ ಪಡೆದುಕೊಂಡಿದ್ದರು.
ಹಿಂದಿನ ರೈಲಿಗೆ ಹೋಲಿಸಿದರೆ ಹೊಸ ರೈಲು ಬಾರೀ ಸಮಯ ಉಳಿತಾಯ ಮಾಡಿದ್ದಲ್ಲದೇ, ಮೊದಲ ದಿನದಿಂದಲೇ ಜನಪ್ರಿಯತೆಯ ಪಡೆದಿದ್ದು ವಿಶೇಷ. ಈ ಎಲ್ಲಾ ಕಾರಣದಿಂದ ಉಡುಪಿ ಹಾಗೂ ಉತ್ತರ ಕನ್ನಡ ಜನರಿಂದ ಪಡೀಲ್ ಮಾರ್ಗದ ಬೆಂಗಳೂರು ರೈಲುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಲೇ ಹೋದ ಹಿನ್ನೆಲೆಯಲ್ಲಿ ಸಂಸದ ಅನಂತ್ ಕುಮಾರ ಹೆಗಡೆ ಹೊಸ ರೈಲಿಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಈಡೇರಿಸುವ ಪೂರ್ವಭಾವಿಯಾಗಿ, ಚಳಿಗಾಲದ ವಿಶೇಷ ರೈಲು ಪಡೀಲ್ ಬೈಪಾಸ್ ರಾಜಮಾರ್ಗದಲ್ಲಿ ಮುರುಡೇಶ್ವರಕ್ಕೆ ಬರಲಿದೆ.
ಈ ವಿಶೇಷ ರೈಲು ಮರುದಿನ ಮದ್ಯಾಹ್ನ ರೈಲಿಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಈಡೇರಿಸುವ ಪೂರ್ವಭಾವಿಯಾಗಿ, ಚಳಿಗಾಲದ ವಿಶೇಷ ರೈಲು ಪಡೀಲ್ ಬೈಪಾಸ್ ರಾಜಮಾರ್ಗದಲ್ಲಿ ಮುರುಡೇಶ್ವರಕ್ಕೆ ಬರಲಿದೆ. ಈ ವಿಶೇಷ ರೈಲು ಮರುದಿನ ಮದ್ಯಾಹ್ನ ಮುರುಡೇಶ್ವರದಿಂದ ಬೆಂಗಳೂರು ಕಡೆ ತೆರಳಲಿದೆ. ಈ ರೈಲಿನ ಘೋಷಣೆಯನ್ನು ಸ್ವಾಗತಿಸಿರುವ ಉತ್ತರ ಕನ್ನಡ ರೈಲ್ ಸೇವಾ ಸಮಿತಿ ಮುಂದಿನ ದಿನಗಳಲ್ಲಿ ಈ ರೈಲನ್ನು ಕಾರವಾರದವರೆಗೆ ವಿಸ್ತರಣೆ ಮಾಡಲು ಪ್ರಯತ್ನ ಆರಂಭಿಸಲಾಗುವುದು ಎಂದು ತಿಳಿಸಿದೆ.