ಭಟ್ಕಳ- ಕುಮಾರ ನಾಯ್ಕ ಭಟ್ಕಳರವರ ಪ್ರಧಾನ ಸಂಪಾದಕತ್ವದಲ್ಲಿ ಆರಂಭಗೊಂಡಿರುವ ಕನಸಿನ ಭಾರತ ವಾರಪತ್ರಿಕೆ ಕರಾವಳಿ ಕರ್ನಾಟಕದ ನೂತನ ಸಂಚಿಕೆಯನ್ನು ಇಂದು ಭಟ್ಕಳದ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ ಅವರು ತಮ್ಮ ಕಚೇರಿಯಲ್ಲಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವರು ಮಾತಾನಾಡಿ ಈ ಕನಸಿನ ಭಾರತ ವಾರ ಪತ್ರಿಕೆಯು ಕರಾವಳಿ ಜನತೆಯ ಕನಸನ್ನು ಸಕಾರಗೊಳಿಸಲು ಪ್ರಯತ್ನಿಸಲಿ ಎಂದು ತಿಳಿಸಿದರು.

RELATED ARTICLES  ಗೇರಸೊಪ್ಪಾದ ಬಳಿ ಕಂದಕಕ್ಕೆ ಉರುಳಿದ ಖಾಸಗಿ ಬಸ್: ವಿದ್ಯಾರ್ಥಿ ದುರ್ಮರಣ

ತಾವು ಸದಾ ಈ ಪತ್ರಿಕೆಗೆ ಸಹಾಯ ಸಹಕಾರ ನೀಡುವುದಾಗಿ ತಿಳುಸಿದರು. ರಮೇಶ್ ಎಸ್ ಜಿ ಬೆಂಗಳೂರು ಸಂಪಾದಕರು, ಇಬ್ರಾಹಿಂ ಕೋಟ ಕಾರ್ಯನಿರ್ವಾಹಕ ಸಂಪಾದಕರಾಗಿ, ಸೀತಾರಾಮ ಆರ್ ಅಚಾರ್ಯ ಶಿರಸಿ ಜಾಹಿರಾತು ಮುಖ್ಯಸ್ಥರಾಗಿ ಈ ಪತ್ರಿಕೆ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಪ್ರಧಾನ ಸಂಪಾದಕ ಕುಮಾರ ನಾಯ್ಕ ಭಟ್ಕಳ, ಸಾಮಾಜಿಕ ಹೋರಾಟಗಾರ ಅಂಥೋನ್ ಜುಜೆ ಲೂಯಿಸ್ ಮುಂಡಳ್ಳಿ ಉಪಸ್ಥಿತರಿದ್ದರು.

RELATED ARTICLES  ಜು.‌ 20 ರಂದು ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ