ಕುಮಟಾ :-ತಾಲೂಕಿನ ಬರ್ಗಿಯ ಸರಕಾರಿ ಪ್ರಾಢಶಾಲೆಯ ಸಂಸ್ಕೃತ ಅಧ್ಯಾಪಕರಾದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾoವಕರ ಬರ್ಗಿಯವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಧಾರವಾಡದ ಅಪರ ಆಯುಕ್ತರ ಕಾರ್ಯಾಲಯದ ಡಾ. ಎಚ್. ಎಫ್. ಕಟ್ಟಿಮನಿ ಪ್ರಾಢ ಶಿಕ್ಷಣ ಪ್ರತಿಷ್ಠಾನದ ಪಂಡಿತ ಕೇಶವ ಶರ್ಮ ಗಲಗಲಿ ದತ್ತಿ ಪ್ರಶಸ್ತಿಯು ಲಭಿಸಿದೆ.
2021-22ನೇ ಸಾಲಿನಲ್ಲಿ ಸರಕಾರಿ ಪ್ರಾಢಶಾಲೆ ಬರ್ಗಿಯ ವಿದ್ಯಾರ್ಥಿಗಳು ಸಂಸ್ಕೃತ ವಿಷಯದಲ್ಲಿ ಕೇವಲ ಪರಿ ಮಾಣಾತ್ಮಕವಲ್ಲದೇ, ಗುಣಾತ್ಮಕವಾಗಿಯೂ ನೂರಕ್ಕೆ ನೂರರಷ್ಟು ಸಾಧನೆಯನ್ನು ತೋರುವಲ್ಲಿ ಅವರಿಗೆ ತೀವ್ರತರವಾಗಿ ಮಾರ್ಗದರ್ಶನವನ್ನು ನೀಡಿ ಪರಿಶ್ರಮಿಸಿದ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾoವಕರ ಬರ್ಗಿಯವರನ್ನು ಅಭಿನಂದಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದೆ.


ಇದು ಪಂಡಿತ ಕೇಶವಶರ್ಮ ಗಲಗಲಿ ಯವರ ಸ್ಮಾರಕ ದತ್ತಿ ಪ್ರಶಸ್ತಿಯಾಗಿದ್ದು, ದೀರ್ಘಕಾಲಿಕವಾಗಿ ಸಂಸ್ಕೃತ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ವಿಶ್ರಾಂತರಾದ ಪ್ರತಿಷ್ಠಿತ ಗಿಬ್ ಬಾಲಕಿಯರ ಪ್ರಾಢಶಾಲೆಯ
ನಿಕಟಪೂರ್ವ ಮುಖ್ಯಾ ಧ್ಯಾಪಕರಾದ ವಿಧ್ವಾನ್ ಎಮ್. ರಮೇಶ ಉಪಾಧ್ಯಾಯರವರು ಪ್ರಾಯೋಜಿಸಿರುತ್ತಾರೆ.
ಮಂಜುನಾಥ ಬರ್ಗಿಯವರಿಗೆ ಕಾರ ವಾರದ ನಂದನಗದ್ದಾದ ಲ್ಲಿನ ಪ್ರೀಮಿಯರ ವಿಜ್ಞಾನ ಮತ್ತು ವಾಣಿಜ್ಞ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕಟ್ಟಿಮನಿ ಪ್ರತಿಷ್ಠಾನದ ಸಂಚಾಲಕರಾದ ವಿಶ್ರಾಂತ ಸಹನಿರ್ದೇಶಕ ಡಾ. ಶಿವಶಂಕರ ಹಿರೇಮಠ ರವರು ಪ್ರಧಾನ ಮಾಡಿದರು.

RELATED ARTICLES  ಕರೋನಾ ವಾರಿಯರ್ಸ ಗೆ ನೆರವಾಗಿ ಮಾನವೀಯತೆ ಮೆರೆಯುತ್ತಿರುವ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು.


ಈ ಸಂದರ್ಭದಲ್ಲಿ ಕಾರವಾರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತೇಶ ನಾಯಕ, ಉಪನಿರ್ದೇಶಕರ ಕಚೇರಿಯ ಎಸ್. ಎಸ್. ಎಲ್. ಸಿ. ನೋಡಲ್ ಅಧಿಕಾರಿಗಳಾದ ನಧಾಫ್ ಹಾಗೂ ಕನ್ನಡ ಭಾಷಾ ಶಿಕ್ಷಕರ ಸಂಘದ ಗಣೇಶ ಭೀಷ್ಟಣ್ಣನವರ ಮೊದಲದವರಿದ್ದರು.
ಕಟ್ಟಿಮನಿ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಬರ್ಗಿಯವರು, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಈಶ್ವರ ನಾಯ್ಕರವರು, ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಅಂಕೋಲಾದ ಸಮರ್ಪಣಾ ವಿಶ್ರಾಂತ ಶಿಕ್ಷಕರ ಬಳಗದ ಅಧ್ಯಕ್ಷ ಏನ್. ಬಿ. ನಾಯ್ಕ ಸೂರ್ವೆ, ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಗಣೇಶ್ ಭಟ್, ಬರ್ಗಿ ಪ್ರಾಢಶಾಲೆಯ ಮುಖ್ಯಾಧ್ಯಾಪಕರಾದ ಮಧುಕೇಶ್ವರ್ ನಾಯಕ, ಕರ್ನಾಟಕದ ಬೋಧಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎಸ್. ಪೈ. ರಾಜ್ಯ ಸಂಚಾಲಕರಾದ ವಿಜಯಕುಮಾರ ನಾಯ್ಕಹಾಗೂ ಕೋಶಾ ಧ್ಯಕ್ಷರಾದ ಶಿವಚಂದ್ರ ಮೊದಲಾದವರು ಅಭಿನಂದಿಸಿದ್ದಾರೆ.

RELATED ARTICLES  ಪ್ರವಾಸಕ್ಕೆಂದು ಬಂದಿದ್ದ ನವವಿವಾಹಿತೆ ನಾಪತ್ತೆ.


ಮಂಜುನಾಥ ಬರ್ಗಿಯವರು ಇತ್ತೀಚಿಗಷ್ಟೇ ಹುಬ್ಬಳ್ಳಿಯ ವಿಶ್ವದರ್ಶನ ದಿನಪತ್ರಿಕೆಯ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನ ರಾಗಿದ್ದಲ್ಲದೆ, ಅವರ ನಿರ್ದೇಶನದಲ್ಲಿ ಕುಮಟಾ ಕನ್ನಡ ಸಂಘದಿಂದ “ಜನ ನುಡಿ “-ಜನಸಾಮಾನ್ಯ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವು ವಿಶಿಷ್ಟವಾಗಿ ಆಯೋಜಿಸಿಲ್ಪಟ್ಟಿದ್ದನ್ನು ಸ್ಮರಿಸ ಬಹುದಾಗಿದೆ