ಮುಂಡಗೋಡ : ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ. 1ರ ಬಳಿ ನಿಲ್ಲಿಸಿಟ್ಟಿದ್ದ ಬೈಕ್ ಇದ್ದಕ್ಕಿದ್ದಂತೆ ಮಾಯವಾಗಿ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ. ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಲಕ್ಷಣ ಎಂಬುವವರು ತಮ್ಮಯಮಹ ಆರ್ ಒನ್ ಫೈವ್ ಬೈಕನ್ನ ಕ್ಯಾಂಪ್ ಪಕ್ಕದ ಗ್ಯಾರೇಜ್‌ಗೆ ರಿಪೇರಿಗಾಗಿ ಡಿ.6ರಂದು ತಂದು ನಿಲ್ಲಿಸಿಟ್ಟಿದ್ದರು. ಆದರೆ ಮಾರನೇ ದಿನ ಹೋಗಿ ನೋಡುವಷ್ಟರಲ್ಲಿ ಬೈಕ್ ನಿಲ್ಲಿಸಿಟ್ಟಿದ್ದ ಜಾಗದಲ್ಲಿ ಇರಲಿಲ್ಲ. ಬೈಕ್ ಕಳ್ಳತನವಾಗಿರಬಹುದು ಎಂದು ಗ್ಯಾರೇಜ್ ಸಮೀಪದ ಹೋಟೆಲ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಚೆಕ್ ಮಾಡಿದಾಗ ಡಿ.6ರಂದು ಮಧ್ಯರಾತ್ರಿ ಬೈಕ್ ಇದ್ದಕ್ಕಿದ್ದಂತೆ ಮಾಯವಾಗಿರುವುದು ರೆಕಾರ್ಡ್ ಆಗಿದ್ದು, ಇದನ್ನ ಕಂಡು
ಎಲ್ಲರೂ ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.

RELATED ARTICLES  ಕುಮಟಾದಲ್ಲಿ ಅಪಘಾತ : ಗ್ರಾ.ಪಂ ಅಧ್ಯಕ್ಷೆಗೆ ಗಂಭೀರ ಗಾಯ.

ಸದ್ಯ ಈ ಬೈಕ್ ಮಾಯದ ಹಿಂದೆ ಭೂತದ ಕೈವಾಡ ಇದೆಯೋ ಅಥವಾ ಕಳ್ಳರ ಕೈಚಳಕವೇನಾದರು ಇದೆಯೋ ತಿಳಿಯದಾಗಿದ್ದು, ಸದ್ಯಬೈಕ್ ಮಾಲೀಕ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸ್ ತನಿಖೆಯ ಬಳಿಕ ಪ್ರಕರಣದ ನಿಜಾಂಶ ತಿಳಿದುಬರಬೇಕಿದೆ.

RELATED ARTICLES  ಪಾಠ ಮಾಡಬೇಕಾದ ಶಿಕ್ಷಕನೇ ಮಾಡ್ತಿದ್ದ ಕಳ್ಳತನ..!