ಶಿರಸಿ: ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಗೆ ಎರಡು ಹಸುಗಳು ಜೀವಂತವಾಗಿ ದಹನವಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಫಕೀರವ್ವ ಲಿಂಗಪ್ಪ ಜಾಡರ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ತಗುಲಿತ್ತು. ಕೊಟ್ಟಿಗೆಯಲ್ಲಿದ್ದ ಎರಡು ಆಕಳುಗಳನ್ನು ಕಾಪಾಡುವ ಮುಂಚೆಯೇ ಬೆಂಕಿಯ ಕೆನ್ನಾಲಿಗೆಯು ಹರಡಿಕೊಂಡಿದ್ದು, ಎರಡೂ‌ ಆಕಳುಗಳು ಜೀವಂತವಾಗಿ ದಹನವಾದ ದುರ್ಘಟನೆ ನಡೆದಿದೆ.

RELATED ARTICLES  ಪ್ರಶಾಂತ ದೇಶಪಾಂಡೆ ಹುಟ್ಟುಹಬ್ಬ ಆಚರಣೆ.