ಅಂಕೋಲಾ: ಉಪವಿಭಾಗಾಧಿಕಾರಿಗಳಾಗಿ ಬಾಗಲಕೋಟ ಜಿಲ್ಲೆಗೆ ವರ್ಗಾವಣೆಗೊಂಡ ತಹಶೀಲ್ದಾರ ಉದಯ ಕುಂಬಾರ ಇವರಿಗೆ ಕೆ.ಸಿ ರಸ್ತೆಯಲ್ಲಿರುವ ಆರ್ಯ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಉದಯ ಕುಂಬಾರ ಇವರು ತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರಿಯತೆ ಹೊಂದಿದ್ದರು. ಆರ್ಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು, ಆರ್ಯ ನ್ಯೂಸ್ ನೆಟ್‌ವರ್ಕ್ ಪ್ರಧಾನ ಸಂಪಾದಕ ಶಶಿಕಾಂತ ಡಿ.ಶೆಟ್ಟಿಯವರು ಉದಯ ಕುಂಬಾರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

RELATED ARTICLES  ಮರ್ಚೆಂಟ್ಸ್‌ ನೇವಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರಿಂದ 2.5 ಲಕ್ಷ ರೂ.ವಸೂಲಿ ಮಾಡಿ, ಪಂಗನಾಮ...!


ಈ ಸಂದರ್ಭದಲ್ಲಿ ಆರ್ಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕ ನಾಗರಾಜ ಎನ್.ಆಚಾರಿ, ಉಪವ್ಯವಸ್ಥಾಪಕ ರಾಜು ಡಿ.ಶೆಟ್ಟಿ, ಸಿಬ್ಬಂದಿ ಪ್ರಶಾಂತ ಸಿ.ಶೆಟ್ಟಿ, ಅರ್ಪಿತಾ ಆರ್.ನಾಯ್ಕ, ಸಂಜನಾ ಕೆ.ರೇವಣಕರ, ವಿನಯಾ ಜಿ.ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES  ಕಾರವಾರದಲ್ಲಿ ಉಚಿತ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ