ಕುಮಟಾ : ನಗರದ ಪುರಸಭೆಯ ವ್ಯಾಯಾಮ ಶಾಲೆ ಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡು ತಾಯ್ನಾಡಿಗೆ ಆಗಮಿಸಿದ ಕ್ರೀಡಾಪಟು ಕುಮಟಾದ ವೆಂಕಟೇಶ್ ನಾರಾಯಣ ಪ್ರಭು ರವರನ್ನು ಶಾಸಕ ದಿನಕರ ಶೆಟ್ಟಿ ಸನ್ಮಾನಿಸಿ ಗೌರವಿಸಿದರು.

ಪವರ್ ಲಿಫ್ಟಿಂಗ್ ನಲ್ಲಿ ದೇಶವನ್ನು ಪ್ರತಿನಿಧಿಸಿ ನ್ಯೂಜಿಲ್ಯಾಂಡ್ ನ ಆಕಲ್ಯಾಂಡ್ ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ದ ಕ್ರೀಡಾಪಟು ವೆಂಕಟೇಶ್ ನಾರಾಯಣ ಪ್ರಭು 93 ಕೆಜಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬಂಗಾರದ ಪದಕ ತನ್ನದಾಗಿಸಿಕೊಂಡು ದೇಶಕ್ಕೆ ಅಷ್ಟೇ ಅಲ್ಲ ಕನ್ನಡ ನಾಡಿಗೆ ಹಾಗೂ ಉತ್ತರ ಕನ್ನಡ ಕ್ಕೆ ಕೀರ್ತಿ ತಂದಿದ್ದಾರೆ ಅವರು ಇಂದ ಕುಮಟಾ ನಗರಕ್ಕೆ ಆಗಮಿಸುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ ವ್ಯಾಯಾಮ ಶಾಲೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

RELATED ARTICLES  ಶಿಕ್ಷಣ ಸಚಿವರಿಂದ ಗುರುಭವನದ ಶಿಲಾನ್ಯಾಸ. ಶಿಕ್ಷಕರ ಸಂಘದಿಂದ ಮನವಿ ಅರ್ಪಣೆ.

ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ ನಮ್ಮ ತಾಲೂಕಿನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮೂಲಕ ನಮ್ಮ ತಾಲೂಕಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಭವಿಷ್ಯ ದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಅವಕಾಶ ಅವರಿಗೆ ಭಗವಂತ ಅನುಗ್ರಹಿಸಲಿ ಎಂದು ಹಾರೈಸಿದರು. ವೆಂಕಟೇಶ್ ರವರ ಕುಟುಂಬಸ್ಥರೂ ಕೂಡ ಅಲ್ಲಿ ಉಪಸ್ಥಿತರಿದ್ದು ಅವರನ್ನು ಕೂಡ ಶಾಸಕರು ಅಭಿನಂದಿಸಿದರು.

RELATED ARTICLES  ಶಿರಸಿ‌ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರ ಮನೆಯ ಮುಂದೆ ಮಾಟ ಮಂತ್ರ? ಜನತೆಯಲ್ಲಿ ಆತಂಕ

ನಂತರ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ತೆರವು ಜೀಪಿನಲ್ಲಿ ಮೆರವಣಿಗೆ ಯ ಮೂಲಕ ವೆಂಕಟ್ರಮಣ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ವಿವೇಕ ಶೇಣ್ವಿ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಪುರಸಭೆ ಮುಖ್ಯಾಧಿಕಾರಿ ಭಂಡಾಕರಕರ್, ಬಿಜೆಪಿ ಮಂಡಲ ಅಧ್ಯಕ್ಷ ಹೇಮಂತಕುಮಾರ ಗಾಂವಕರ್, ವ್ಯಾಯಾಮ ಶಾಲೆಯ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.