ಅಂಕೋಲಾ : ತಾಲ್ಲೂಕಿನ ಸುಂಕಸಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಡ್ಲಗದ್ದೆ ಗ್ರಾಮದ ಬಾಳೆಹಾಡ ನಿಂದ ಮುಂಡೇಗಾಳಿ ರಸ್ತೆ ನಿರ್ಮಾಣ ಹಾಗೂ ರಾಮನಗುಳಿ ಖಂಡ್ರಮನೆ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕಿ ರೂಪಾಲಿ ನಾಯ್ಕ ಭೂಮಿ ಪೂಜೆ ನೆರವೇರಿಸಿದರು.

ಕೊರೊನಾ ಎಂಬ ಮಾಹಾಮಾರಿಯ ರೋಗದಲ್ಲಿ ಪರಸ್ಪರ ಸಹಾಯ ಮಾಡುವುದು ಕಷ್ಟವಾಗಿತ್ತು. ಜಿಲ್ಲಾ ಕೇಂದ್ರವಾಗಿರುವ ಕಾರವಾರದಲ್ಲಿ ಹೊರ ದೇಶದಿಂದ ಆಕ್ಸಿಜನ್ ವ್ಯವಸ್ಥೆಯನ್ನು ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ಮಾಡಿದ್ದರು. ನಾವೆಲ್ಲರೂ ಮಾನವೀಯತೆಯನ್ನು ಮರೆಯಬಾರದು‌. ಸಂಕಷ್ಟದ ನಡುವೆಯೂ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಇದುವರೆಗೂ ಸುಮಾರು 20 ಕೋಟಿಗೂ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ‌ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ವಶವಾಯ್ತು ಸಾಗವಾನಿ ಕಟ್ಟಿಗೆ ,ಆರೋಪಿಗೆ ಬಿತ್ತು ದಂಡ

ಕಾರವಾರ-ಅಂಕೋಲಾ ಕ್ಷೇತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿದೆ. ಇಲ್ಲಿಯ ಯುವಕರು ಉದ್ಯೋಗವನ್ನು ಕಲ್ಪಿಸುವ ಯೋಜನೆ ಇದೆ. ಇತಿಹಾಸದ ಪುಟದಲ್ಲಿ ಅಂಕೋಲಾ ಮತ್ತು ಕಾರವಾರ ತಾಲ್ಲೂಕುಗಳು ಅಚ್ಚಳಿಯದೆ ಉಳಿಯಲಿದೆ.

RELATED ARTICLES  ‘ಅಘನಾಶಿನಿ ನದಿ ತಿರುವು ಯೋಜನೆ ಸರ್ಕಾರದ ಮಧ್ಯೆ ಇದೆ, ಇದಕ್ಕೆ ಯಾವಾಗಲಾದರೂ ಜೀವ ಬರಬಹುದು! ; ವೈ.ಬಿ.ರಾಮಕೃಷ್ಣ

ಈ ಸಂದರ್ಭದಲ್ಲಿ ‌ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಬಿಜೆಪಿ ಮಂಡಲದ ಅಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.