ಅಂಕೋಲಾ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂದಿನ ಬೀಗ ಮುರಿದು ಮನೆಯಲ್ಲಿದ್ದ ಬೆಳ್ಳಿ- ಬಂಗಾರವನ್ನು ದೋಚಿಕೊಂಡು ಹೋದ ಘಟನೆ ತಾಲೂಕಿನ ಮಾದನಗೇರಿ ಬಳಲೆಯಲ್ಲಿ ನಡೆದಿದೆ. ಹರಿಶ್ಚಂದ್ರ ಭಂಡಾರಿಯವರು ಎರಡು ದಿನ ಮನೆಯಲ್ಲಿಲ್ಲದ ಸಮಯವನ್ನೆ ನೋಡಿಕೊಂಡು ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದಬೀಗವನ್ನು ಮುರಿದು, ಮನೆಯೊಳಗೆ ಹೊಕ್ಕಿಮನೆಯ ಬೆಡ್‌ರೂಮ್ ಕೋಣೆಗಳಲ್ಲಿದ್ದ ಗೋದ್ರೇಜ್ ಕಪಾಟುಗಳನ್ನು ಒಡೆದು ಹಣ, ಬಂಗಾರ ಸೇರಿದಂತೆ ಮೌಲ್ಯಯುತ ವಸ್ತುಗಳಿಗೆ ಹಣ, ಬಂಗಾರ ಸೇರಿದಂತೆ ಮೌಲ್ಯಯುತ ವಸ್ತುಗಳಿಗೆ ಹುಡುಕಾಡಿದ್ದಲ್ಲದೇ, ಅಡುಗೆ ಕೋಣೆಗೆ ತಾಗಿಕೊಂಡು ಇರುವ ಬೆಡ್‌ರೂಮ್ ಕೋಣೆಯಲ್ಲಿನ ಕಪಾಟ್‌ನ್ನು ಒಡೆದು ಅದರೊಳಗಿದ್ದ ಸುಮಾರು ಒಂದು ಜೊತೆ ಬೆಳ್ಳಿಯ ಗೆಜ್ಜೆ, ಬೆಳ್ಳಿಯ ಮಕ್ಕಳ ಡಾಬು, ಬೆಳ್ಳಿಯ ವಾಂಕ್, ಪಂಚಲೋಹದ ವಾಂಕ್, ಅಂದಾಜು 10 ಗ್ರಾಂ. ತೂಕದ ಕರಿಮಣಿ ಮಿಶ್ರಿತ ಬಂಗಾರದ ಒಂದು ತಾಳಿ ಸರವನ್ನು ಹಾಗೂ ಮನೆಯ ಹಾಲ್‌ನ ಶೋಕೇಸ್‌ದಲ್ಲಿ ಡಬ್ಬಿಯೊಂದರಲ್ಲಿ ಇಟ್ಟಿದ್ದ 6500 ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತಾಗಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಕೊಂಡಿದ್ದಾರೆ.

RELATED ARTICLES  ಚರ್ಚಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀಗಣೇಶ ಹೆಗಡೆ