ಕಾರವಾರ : ಚಲಿಸುತ್ತಿದ್ದ ಟಿಪ್ಪರ್ ಡ್ರೈವರ್ ನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡು, ಹೃದಯಾಘಾತದಿಂದ ಆತ ಸಾವನ್ನಪ್ಪಿದ್ದು, ತನ್ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದಾಗ ಘಟನೆ ವರದಿಯಾಗಿದೆ.

ಲೇಬರ್ ಕ್ಯಾಂಪ್ ಅರ್ಗಾದಲ್ಲಿ ಎನ್.ಸಿ.ಸಿ ಕಂಪನಿಯಲ್ಲಿ ಟಿಪ್ಪರ್ ಚಾಲಕನಾಗಿರುವ ಅಸ್ಸಾಂ ಲಖಿಮಪುರ್ ಮೂಲದ ಸುನೀಲ ನಾಗ ಗೇಬನ (42) ಎನ್ನುವವರು ಹೃದಯಾಘಾತದಿಂದ ನಿಧನರಾದವರಾಗಿದ್ದಾರೆ.

RELATED ARTICLES  20 ಗೋಲ್ಡ್ ಮೆಡಲ್ ಪಡೆದ ಹಳ್ಳಿಯ ಪ್ರತಿಭೆ ಚೈತ್ರಾ ನಾರಾಯಣ ಹೆಗಡೆ

ಈ ಸುದ್ದಿಯನ್ನೂ ಓದಿ – ಭೀಕರ ಅಪಘಾತ : ಪುಟ್ಟ ಮಗು ಸೇರಿ ಮೂವರು ಸಾವು.


ಎದೆ ನೋವು ಕಂಡ ತಕ್ಷಣ ಇವರು ತಮ್ಮ ಟಿಪ್ಪರ್ ಸುರಕ್ಷಿತವಾಗಿ ನಿಲ್ಲಿಸಿದ್ದು, ನಂತರ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿನ ಎನ್.ಸಿ.ಸಿ ಕಂಪನಿಯ ಅಂಬ್ಯೂಲೆನ್ನ ಮೇಲೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

RELATED ARTICLES  ವಿದ್ಯಾರ್ಥಿಗಳ ಸುರಕ್ಷತೆಯೇ ನಮಗೆ ಪ್ರಥಮಾದ್ಯತೆಯಾಯಿತು : ಕೊಂಕಣ ಸಂಸ್ಥೆಯಿಂದ ಪ್ರಕಟಣೆ.

ಇದನ್ನೂ ಓದಿ – ಸಣ್ಣ ಗುಳ್ಳೆಯಾಗಿದ್ದ ರೋಗ ಈಗ ಮುಖವನ್ನೇ ಕಾಣದಂತೆ ಮಾಡಿದೆ.

ಈ ಕುರಿತು ಜೋಯಲಾಲ ಪನಿಕಾ ಸುಖಲಾಲ ಎನ್ನುವವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.