ಕಾರವಾರ : ದಾಂಡೇಭಾಗ ಕ್ರಾಸ್ ಕಡೆಯಿಂದ ಎನ್.ಎಚ್-66 ರಸ್ತೆಗೆ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಬೈಕ್ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ತಲುಪಿ ದ್ವಿಮುಖ ಸಂಚಾರದ ಎರಡು ಕಡೆಗೆ ನೋಡದೇ ಕಾರವಾರದ ಕಡೆಯಿಂದ ಗೋವಾ ಗಡಿಯ ಕಡೆಗೆ ಹೋಗುತ್ತಿದ್ದ ಕಾರಿಗೆ ವಾಗಂಡಾದ ಕಾಸದ ಬಳಿ ಡಿಕ್ಕಿ ಹೊಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಆತ್ಮಹತ್ಯೆಗೆ ಶರಣಾದ ಖ್ಯಾತ ಸಿನಿಮಾ ನಟ.

ಅತಿ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಚಾಲನೆ ಮಾಡಿದ ಬೈಕ್ ಸವಾರ ಕಾರಿಗೆ ಗುದ್ದಿ ಅಪಘಾತಪಡಿಸಿ ಗಾಯಗೊಂಡ ಘಟನೆ ವಾಗಂಡಾದ ಕ್ರಾಸ್ ಬಳಿ ನಡೆದಿದೆ. ಕಾರು ಚಲಾಯಿಸುತ್ತಿದ್ದ ಸಿದ್ದರ ಗುನಗಿವಾಡಾದ ಸಾಹೀಸ್ ಸಂತೋಷ ಗುನಗಿ ಎನ್ನುವವರು ಬೈಕ್ ಚಾಲಕ ಮಾಜಾಳಿಯ ಕಿರಣ ನಾಯ್ಕ ವಿರುದ್ಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ವೈನ್ ಶಾಪ್ ಗೆ ಕನ್ನ ಹಾಕಿದ ಕಳ್ಳರು : ಲಾಕ್ ಡೌನ್ ಸಮಯದಲ್ಲಿಯೇ ವ್ಯಸನಿಗಳ ಕರಾಮತ್ತು?

ಅಪಘಾತದಲ್ಲಿ ಬೈಕ್ ಸವಾರ ಕಿರಣ ನಾಯ್ಕ ಇವರ ತಲೆಗೆ ಗಾಯವಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು ಸಂಪೂರ್ಣ ವಿವರ ನಿರೀಕ್ಷಿಸಿದೆ.