ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ವರ್ಗ ಮಾಡಿ ಆದೇಶ ಹೊರಡಿಸಲಾಗಿದೆ. ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುವುದರ ಮೂಲಕ ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿದ್ದ ಪ್ರಿಯಂಗಾ ಎಂ ವರ್ಗಾವಣೆಗೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಎಂ.ಡಿ ಯಾಗಿ ಪ್ರಿಯಾಂಗಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಪ್ರಿಯಾಂಗಾ ಎಂ ಅವರ ಜಾಗದಲ್ಲಿ ಐಎಎಸ್ ಅಧಿಕಾರಿ ಈಶ್ವರ ಖಾಂಡೋರರನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನ ಸಿಇಓ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES  ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಅವಶ್ಯಕತೆ: ಅಭಿಯಾನಕ್ಕೆ ಬೆಂಬಲ‌ ಸೂಚಿಸಿದ ಶಾಸಕ ಸುನೀಲ್ ನಾಯ್ಕ.

ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ತುರ್ತು ಸ್ಪಂದನೆ ಹಾಗೂ ಜನರ ಜೊತೆಗೆ ಪ್ರೀತಿಯ ಒಡನಾಟ ಬೆಳೆಸಿಕೊಂಡು ಜನತೆಯ ಪ್ರೀತಿಗಳಿಸಿದ ಪ್ರಿಯಾಂಗಾ ಎಂ. ಇದೀಗ ವರ್ಗಾವಣೆಗೊಂಡಿದ್ದಾರೆ.

RELATED ARTICLES  ಒಣಗಿಸಿದ ಬಟ್ಟೆ ತೆಗೆಯುವಾಗ ವಿದ್ಯುತ್ ಹರಿದು ಅವಘಡ : ಸಾವಿಗೀಡಾದ ಕಮಲಾಕರ ಹೆಗಡೆ