ಭಟ್ಕಳ: ತಾಲೂಕಿನ ಮರವರ್ಗ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣಕ್ಕೆ ಈಡಾಗಿದ್ದಾನೆ. ಮೃತ ಸವಾರನನ್ನು ಮೂಸಾ ನಗರದ ಇಮಾನ್ ಸಲೀಂ (34) ಎಂದು ಗುರುತಿಸಲಾಗಿದೆ. ಈತ ಕುಂದಾಪುರದಿಂದ ಭಟ್ಕಳದ ಕಡೆಗೆ ಪ್ರಯಾಣಿಸುತ್ತಿದ್ದರೆ, ಕಾರು ಭಟ್ಕಳದಿಂದ ಕುಂದಾಪುರದ ಕಡೆಗೆ ಹೊರಟಿತ್ತು. ಈ ವೇಳೆ ಕಾರ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ರಾಜ್ಯ ಮಟ್ಟದ ಸಾಧಕಿ ನಿಹಾರಿಕಾ