ಕಾರವಾರ: ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕೆಲ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ‘ದೀವಟಿಗೆ ಸಲಾಂ’ ‘ಸಲಾಂ ಆರತಿ’ ಮತ್ತು ‘ಸಲಾಂ ಮಂಗಳಾರತಿ’ ಪೂಜಾಕಾರ್ಯಗಳ ಹೆಸರನ್ನು ಬದಲಿಸಲು ಇಲಾಖೆ ಮುಂದಾಗಿದೆ. ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದ್ದು, ಈ ಪೂಜಾಕಾರ್ಯಗಳ ಹೆಸರನ್ನು ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.


ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ, ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತ್ರುತ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES  ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕಾಗಿ ವಿಶೇಷ ಕಾಳಜಿ ವಹಿಸಬೇಕೆಂದು ಕೋರಿ ಪತ್ರ ಬರೆದ ಶಾಸಕ ಸುನೀಲ್ ನಾಯ್ಕ


ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ ‘ದೀವಟಿಗೆ ಸಲಾಂ’ ಪದದ ಬದಲಿಗೆ ‘ದೀವಟಿಗೆ ನಮಸ್ಕಾರ’, ‘ಸಲಾಂ ಆರತಿ’ ಬದಲಾಗಿ ‘ಆರತಿ ನಮಸ್ಕಾರ’ ಹಾಗೂ ‘ಸಲಾಂ ಮಂಗಳಾರತಿ” ಪದದ ಬದಲಿಗೆ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸಿ, ಸೇವಾ ಕಾರ್ಯ ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇನ್ನು ಕೇವಲ ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮತ್ತು ಪೂಜೆಗಳನ್ನು ಮುಂದುವರೆಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ದ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಯಲ್ಲಿ ನಿತ್ಯ ಸಂಜೆ ಟಿಪ್ಪು ಹೆಸರಿನಲ್ಲಿ ಪೂಜೆ ನಡೆಸುತ್ತ ಬಂದಿದೆ. ಗೋಕರ್ಣದ ಮಹಾಬಲೇಶ್ವರ, ಪಾರ್ವತಿ ದೇವಿ ಮತ್ತು ತಾಮ್ರ ಗೌರಿ ಮಂದಿರಗಳಲ್ಲಿ 300 ವಷÀðಕ್ಕೂ ಹಿಂದಿನಿAದ ಟಿಪ್ಪು ಹೆಸರಿನಲ್ಲಿ ನಿತ್ಯ ಸಂಜೆ 8.30ಕ್ಕೆ ಸರಿಯಾಗಿ ಪೂಜೆ ನಡೆಯುತ್ತದೆ. ಇದಕ್ಕೆ ‘ಸಲಾಂ ಪೂಜೆ’ ಎನ್ನಲಾಗುತ್ತದೆ.
ಸಲಾಂ ಪೂಜೆಯೂ ಉಳಿದೆಲ್ಲ ಹಿಂದೂ ದೇವರ ಪೂಜೆಗಳಂತೆ ಮಂತ್ರೋಚ್ಚಾರಣೆ ಮೂಲಕವೆ ನಡೆಯುತ್ತದೆ. ಆದರೆ ಪೂಜೆಗೂ ಪೂರ್ವದಲ್ಲಿ ಮೂರು ಬಾರಿ ಸಲಾಂ ಎಂದು ಉದ್ಘೋಷ ಮಾಡಲಾಗುತ್ತದೆ. ನಿತ್ಯ ರಾತ್ರಿ 8.30ಕ್ಕೆ ಮಹಾಬಲೇಶ್ವರ ಪ್ರಮುಖ ದ್ವಾರದ ಮುಂದೆ ಸಲಾಂ ಸಲಾಂ ಸಲಾಂ ಎಂದು ಕೂಗಿ ಬಳಿಕ ಆತ್ಮಲಿಂಗದ ಸನ್ನಿಧಿಯಲ್ಲಿ ಪೂಜೆ ಸಲ್ಲುತ್ತದೆ. ನಂತರ ಅಲ್ಲಿಂದ ಪಾರ್ವತಿ ಹಾಗೂ ಗಣಪತಿ ದೇವಾಯಲಕ್ಕೆ ಹೋಗಿ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಮತ್ತೆ ಮಹಾಬಲೇಶ್ವರ ಸನ್ನಿಧಿಗೆ ವಾಪಸ್ ಬಂದು ಮರು ಸಲಾಂ ಅರ್ಪಿಸಿ ತುಳಸಿ ಕಟ್ಟೆ ಮತ್ತು ಮಹಾಗಣಪತಿಗೆ ಸಲಾಂ ಅರ್ಪಿಸಲಾಗುತ್ತದೆ.
ಹಿಂದೆ ಮೈಸೂರು ಸಂಸ್ಥಾನದ ಆಳ್ವಿಕೆ ಸಂದರ್ಭ ಅಂದಿನ ಗೋಕರ್ಣ ಕಬಳಿಸಲು ಟಿಪ್ಪು ಆಜ್ಞೆಯಂತೆ ಸೈನಿಕರು ಇಲ್ಲಿನ ಪುರಾಣ ಪ್ರಸಿದ್ಧ ದೇವಾಲಯಗಳ ಮೇಲೆ ದಾಳಿ ಮಾಡಿದ್ದರು. ಅದರ ಮರುದಿನ ರಾತ್ರಿ ಟಿಪ್ಪುವಿಗೆ ದುಸ್ವಪ್ನವಾಯಿತು. ಆಗ ಶಿವನ ಭಯ ಕಾಡತೊಡಗಿ ಅದೇ ದಿನ ಟಿಪ್ಪು ಮಹಾಬಲೇಶ್ವರನ ಸನ್ನಿಧಿಗೆ ಬಂದು ಕ್ಷಮೆ ಯಾಚನೆ ಮಾಡಿದ್ದ. ದೇವರಿಗೆ ಸಲಾಂ ವಂದನೆ ನೀಡಿ ಕಪ್ಪಕಾಣಿಕೆ ಸಲ್ಲಿಸಿದ್ದ ಎಂಬ ಕತೆ ಇದೆ. ಇಷ್ಟೇ ಅಲ್ಲದೇ ಕೊಲ್ಲುರು, ಶೃಂಗೇರಿ ದೇವಸ್ಥಾನದಲ್ಲೂ ಇಂದಿಗೂ ಸಲಾಂ ಪೂಜೆ ಮಾಡುತ್ತಾ ಬರಲಾಗಿದೆ.

RELATED ARTICLES  ಪರಿಹಾರ ಸಿಗದ ರೈತರಿಗೆ ವಿಮಾ ಕಂಪೆನಿಗಳು ನೆರವಾಗಬೇಕೆಂದು ಮನವಿ.