ಭಟ್ಕಳ : ಗೋವುಗಳಿಗೆ ಚರ್ಮ ಹಾಗೂ ಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು ಉತ್ತರ ಕನ್ನಡದ ಹಲವು ಭಾಗಗಳಲ್ಲಿ ಜಾನುವಾರುಗಳು ಈ ಸಮಸ್ಯೆ ಎದುರಿಸುತ್ತಿದೆ. ಚರ್ಮ ಗಂಟು ರೋಗದಿಂದ ಬಳಲುತ್ತಿದ್ದ ಎತ್ತೊಂದನ್ನು ಗಮನಿಸಿದ ಶಿರಾಲಿ ಭಾಗದ ಕೆಲ ಆಟೋ ಚಾಲಕರು ಎತ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿರುವ ಘಟನೆಯೊಂದು ವರದಿಯಾಗಿದೆ.
ಕೆಲ ದಿನಗಳಿಂದ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 10 ರಿಂದ 15 ಜಾನುವಾರುಗಳಿಗೆ ಈ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಆ ಪೈಕಿ ಚರ್ಮ ಗಂಟು ರೋಗದಿಂದ ಬಳಲುತ್ತಿದ್ದ ಒಂದು ಎತ್ತನ್ನು ಗಮನಿಸಿದ ಸ್ಥಳೀಯ ಶಿರಾಲಿ ಆಟೋ ಚಾಲಕರು ಎತ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಚರ್ಮ ಗಂಟು ರೋಗದ ಬಗ್ಗೆ ಶಿರಾಲಿ ಗ್ರಾಮ ಪಂಚಾಯತನಿಂದ ಸದ್ಯ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗ್ರತಿ ಮುಡಿಸಲಾಗುತ್ತಿದೆ. ಏತನ್ಮಧ್ಯೆ ಇವರು ಕೈಗೊಂಡಿರುವ ಕಾರ್ಯ ಇದೀಗ ಜನ ಮೆಚ್ಚುಗೆ ಪಡೆದುಕೊಂಡಿದೆ.
ಈ ಸುದ್ದಿಗಳನ್ನೂ ಓದಿ.