ಭಟ್ಕಳ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸಾಮಾಜಿಕವಾಗಿ ಮಹಿಳೆಯರು ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಅಂತಹವುದೇ ಪ್ರಕರಣ ಒಂದು ಇದೀಗ ಮತ್ತೆ ಬೆಳಕಿಗೆ ಬಂದಿದೆ. ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಏಕಾಗ್ರತೆ ಹೆಚ್ಚಲು ಹೀಗೆ ಮಾಡಿ.

ಮಹಿಳೆಯು ತನ್ನ ಮನೆಯಲ್ಲಿದ್ದ ಸಂದರ್ಭದಲ್ಲಿ ತಾಲೂಕಿನ ಯಲ್ವಡಿಕವೂರ್ ವ್ಯಾಪ್ತಿಯ ಯುವಕ ದ್ವೇಷದಿಂದ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಕುತ್ತಿಗೆ ಒತ್ತಿ ಕೊಲ್ಲಲು ಯತ್ನಿಸಿದ್ದ. ಈತನ ಕೃತ್ಯಕ್ಕೆ ಸಂಬಂಧಿ ಮಹಿಳೆಯೊಬ್ಬರೂ ಸಹಕರಿಸಿದ್ದಾರೆ ಎನ್ನಲಾಗಿ ದೂರು ದಾಖಲಾಗಿದೆ.

RELATED ARTICLES  ಪ್ರಸಕ್ತ ಶೈಕ್ಷಣಿಕ ವರ್ಷ ಏಪ್ರಿಲ್ 09 ಕ್ಕೆ ಮುಕ್ತಾಯ? ಮೇ 15 ರ ವರೆಗೆ ಬೇಸಿಗೆ ರಜೆ..!

ಇದೇ ಸಂದರ್ಭದಲ್ಲಿ ಹಲ್ಲೆಗೊಳಗಾದ ಮಹಿಳೆಯ ಪತಿ ಮೇಲೂ ಕಾಯಿ ಸುಲಿಯುವ ಸುಲ್ಮಣೇ ಹಾಗೂ ಹೆಮ್ಮೆಟ್‌ನಿಂದ ಮುಖ, ಬಾಯಿ, ಕಣ್ಣಿಗೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ತನಿಖೆಯ ನಂತರದಲ್ಲಿ ಘಟನೆಯ ಸತ್ಯತೆ ಹೊರ ಬರಬೇಕಾಗಿದೆ.