ಕುಮಟಾ : ತಾಲೂಕಿನ ಹೊಳೆಗದ್ದೆ ಸಮೀಪದ ಸುವರ್ಣಗದ್ಡೆಯ ಶ್ರೀಮತಿ ಮಹಾದೇವಿ ಗಜಾನನ ಭಟ್ಟ ಇವರಿಗೆ ಈ ವರ್ಷದ “ಉಂಡೆಮನೆ ಪ್ರಶಸ್ತಿ”ಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ತನ್ನ ಪತಿ ದಿ.ಗಜಾನನ ಭಟ್ಟರು ಸ್ಥಾಪಿಸಿದ ‘ಸ್ವರ್ಣಾ ಲೇಟೆಕ್ಸ್ ‘ ಕೈಗವಸು ತಯಾರಿಕಾ ಸಂಸ್ಥೆಗೆ ಕರ್ನಾಟಕದಲ್ಲಿ ಪ್ರತಿಷ್ಠಿತ ಸ್ಥಾನವನ್ನು ತಂದು ಕೊಡುವಲ್ಲಿ ಇವರ ಕೊಡುಗೆ ಗಮನಾರ್ಹವಾದುದು.ಸಂಸ್ಥೆಯು ಚಿಗುರೊಡೆಯುವ ಹಂತದಲ್ಲಿ ಗಂಡನನ್ನು ಕಳಕೊಂಡರೂ ಧೃತಿಗೆಡದೆ ಮಗ ಮಂಜುನಾಥ ಭಟ್ಟರಿಗೆ ಮಾರ್ಗದರ್ಶನ ಬೆಂಬಲವನ್ನು ನೀಡುತ್ತಾ ಸಂಸ್ಥೆಯನ್ನು ಬೆಳೆಸಿದರು.

RELATED ARTICLES  ಧಾರೇಶ್ವರ ದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

ಇವರು ಮಗನನ್ನು ಯಶಸ್ವೀ ಉದ್ಯಮಿಯನ್ನಾಗಿ ಬೆಳೆಸುವುದರೊಂದಿಗೆ ಸಮಾಜಮುಖಿಯನ್ನಾಗಿಸಿ ಸಮಾಜಸೇವಕನನ್ನಾಗಿಸಿದ ಆದರ್ಶ ಮಾತೆಯೂ ಸ್ವತಃ ಸಮಾಜಸೇವಾಸಕ್ತರೂ ಆಗಿದ್ದಾರೆ. ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಎಲ್ಲಾ ಸಮಾಜಮುಖಿ ಸೇವಾಕಾರ್ಯಗಳಲ್ಲಿ ಇವರ ಕುಟುಂಬ ಸಕ್ರಿಯವಾಗಿ ತೊಡಗಿಕೊಂಡಿದ್ದು ಇಳಿವಯಸ್ಸಿನಲ್ಲೂ ಉತ್ಸಾಹೀ ಮನದವರಾಗಿದ್ದು ಆದರಾತಿಥ್ಯದಲ್ಲೂ ಮಾದರಿಯಾಗಿದ್ದಾರೆ. ಇವರ ಸದ್ದಿಲ್ಲದ ಸಮಗ್ರ ಸಾಧನೆಯನ್ನು ಗೌರವಿಸುತ್ತಾ ಇಪ್ಪತ್ತೇಳನೆಯ ವರ್ಷದ ಪ್ರಶಸ್ತಿಯನ್ನು ಘೋಷಿಸಲಾಗಿದೆ.

RELATED ARTICLES  ಹೆಗಡೆ ಕೋಲ್ಡ್‌ಡ್ರಿಂಕ್ಸ್‌ನ ಮಾಲಿಕ ಶ್ರೀಕಾಂತ ವಾಸುದೇವ ಹೆಗಡೆ ನಿಧನ

ಇದೇ ತಿಂಗಳಿನ 24 ರಂದು ಪ.ಪೂ.ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠಂನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆಂದು “ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ”ಯ ಸಂಚಾಲಕ ಯು.ಎಸ್. ವಿಶ್ವೇಶ್ವರ ಭಟ್ಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.