ಶಿರಸಿ : ಬೈಕ್ ಹಾಗೂ ಟಾಟಾ ಏಸ್ ವಾಹನಗಳ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿರಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯ ಕರಿಗುಂಡಿ ರಸ್ತೆಯ ಬಳಿ ನಡೆದಿದೆ.

RELATED ARTICLES  ವಿಶ್ವಜಲ ದಿನಾಚರಣೆ ನಿಮಿತ್ತ ‘ಜಲಾಮೃತ’ ಕಾರ್ಯಕ್ರಮ

ನಾರಾಯಣ ಮುತ್ತಯ್ಯ ಮೊಗೆರ ಮೃತ ಪಟ್ಟ ದುರ್ದೈವಿ ಯಾಗಿದ್ದಾನೆ.ಇತನು ಕರಿಗುಂಡಿ ರಸ್ತೆಯ ಮಾರ್ಗವಾಗಿ ಕಸ್ತೂರಬಾ ನಗರದ ಕಡೆಗೆ ಹೋಗುತ್ತಿದ್ದಾಗ ಎದುರಿಗೆ ಗಡೆಯಿಂದ ಟಾಟಾ ಎಸ್ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿ ತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ್ದಾನೆ.

RELATED ARTICLES  ಅಜಾಗರೂಕತೆಯಿಂದಾಗಿ ಹಾರಿಗೋಗುತ್ತಿದೆ ಅಮಾಯಕರ ಪ್ರಾಣ: ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಡಿಕ್ಕಿಯ ರಭಸಕ್ಕೆ ಬೈಕ್ ಸವಾರಿನಿಗೆ ಗಂಭೀರವಾಗಿ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತ ಪಟ್ಟಿರುವುದನ್ನು ದೃಢೀಕರಿಸಿದ್ದಾರೆ.