ಕುಮಟಾ: ತಾಲೂಕಿನ ದೀವಗಿ ಮೂಲದ ನಿವಾಸಿ ಟ್ಯಾಕ್ಸಿ ಚಾಲಕ ಕೀರ್ತಿಕಿರಣ ಗೊನ್ಸಾಲಿಸ್ (35) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಕುಮಟಾದಿಂದ ತಮ್ಮ ಟ್ಯಾಕ್ಸಿಯ ಮೂಲಕ ಡಿ.10 ರಂದು ಪ್ರವಾಸಿಗರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಸಂಜೆ ರಕ್ತದೊತ್ತಡ ಹೆಚ್ಚಾಗಿ ಏಕಾಏಕಿ ಕುಸಿದು ಬಿದ್ದ ವೇಳೆ ಪ್ರವಾಸಿಗರು ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ಸಿ.ವಿ.ಎಸ್‍.ಕೆ ಅತ್ಯುತ್ತಮ ಸಾಧನೆ

ರಕ್ತದೋತ್ತಡ ಉಂಟಾದ ಪರಿಣಾಮ ಬ್ರೇನ್‌ಹ್ಯಾಮರೇಜ್‌ನಿಂದ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕೀರ್ತಿಕಿರಣ ಕುಮಟಾದಲ್ಲಿ ಎಲ್ಲರಿಗೂ ಪರಿಚಯರಾಗಿದ್ದು, ಕ್ರಿಯಾಶೀಲರಾಗಿದ್ದ ಇವರು, ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹ ಹೊಂದಿದ್ದರು.

RELATED ARTICLES  ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ಪಿಯು ಕಾಲೇಜ್ ಸಾಧನೆ.

ತಾಯಿ, ಪತ್ನಿ, ಓರ್ವ ಪುತ್ರಿ, ಸಹೋದರ ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕುಮಟಾ ತಾಲೂಕಿನ ಟ್ಯಾಕ್ಸಿ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.