ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ತೊಡಗಿದೆ ಎಂದು ಆರೋಪಿಸಿದ NSUI ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದು ಇದೀಗ, ವಿದ್ಯಾರ್ಥಿ ವೇತನ, ಉಚಿತ ಬಸ್ ಪಾಸ್, ಫಲಿತಾಂಶ ವಿಳಂಬ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 17 ರಂದು ಶಾಲಾ-ಕಾಲೇಜು ಬಂದ್ ಗೆ ಅಖಿಲ ಭಾರತ ವಿದ್ಯಾರ್ಥಿ ಕಾಂಗ್ರೆಸ್ ಒಕ್ಕೂಟ (NSUI) ಕರೆ ನೀಡಿದೆ.
ಈ ಹಿಂದೆ ಪರೀಕ್ಷೆಗಳ ಫಲಿತಾಂಶ ನಿಗದಿತ ಅವಧಿಗಿಂತ ಕೆಲವು ದಿನ ಮೊದಲು ಅಥವಾ ತಡವಾಗಿ ಬರುತ್ತಿದ್ದವು.ಆದರೆ ಈಗ ವರ್ಷವೇ ಕಳೆದರೂ ಪರೀಕ್ಷಾ ಫಲಿತಾಂಶ ಪ್ರಕಟಿಸುತ್ತಿಲ್ಲ. ಸರ್ಕಾರಿ ಕಾಲೇಜ್ ಗಳಲ್ಲೂ ಶುಲ್ಕ ಏರಿಸಲಾಗಿದೆ. ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಸೈಕಲ್ ವಿತರಣೆ ನಿಲ್ಲಿಸಲಾಗಿದೆ ಎಂದು ದೂರಿದ NSUI, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 17ರಂದು ಶಾಲಾ, ಕಾಲೇಜು ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದೆ.