ಯಲ್ಲಾಪುರ: ಜಿಲ್ಲೆಯ ಯಕ್ಷಗಾನ ಭಾಗವತರಾಗಿದ್ದ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಮಂಗಳವಾರ ರಾತ್ರಿ ಅಪಘಾತದಲ್ಲಿ ಅಸುನೀಗಿದ್ದಾರೆ. ತಾಲೂಕಿನ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಹಿತ್ಲಳ್ಳಿ ಕ್ರಾಸ್ ಬಳಿ ಮೋಟಾರ್ ಸೈಕಲ್ ಮತ್ತು ಕಾರ್ ನಡುವೆ ಅಪಘಾತ ನಡೆದು, ಶಿರಸಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಮಧ್ಯರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಭಗವತರು ನಿಧರಾಗಿದ್ದಾರೆ ಎಂದು ತಿಳಿದುಬಂದಿದೆ. ಯಕ್ಷಗಾನದ ಮಟ್ಟು ಮತ್ತು ರಾಗಗಳಲ್ಲಿ ವಿಶೇಷ ಪರಿಣಿತ ಪಡೆದಿದ್ದ ಇವರ ನಿಧನವು ಯಕ್ಷಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

RELATED ARTICLES  ಕಾರವಾರ ಆಸ್ಪತ್ರೆಯಿಂದ 6 ಜನ ಡಿಶ್ಚಾರ್ಜ

ಪ್ರಸಿದ್ಧ ಭಾಗವತರಾಗಿದ್ದ ತಂದೆ ಕೃಷ್ಣ ಭಾಗವತ ಅವರ ಬಳಿ ಭಾಗವತಿಕೆ ಕಲಿತ ಇವರು, ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಸಂಗೀತ ಕಲಿತಿದ್ದರು. ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದರು. ತಾವೇ ಮಕ್ಕಳ ತಾಳಮದ್ದಲೆ ಕೂಟವನ್ನು ಹುಟ್ಟು ಹಾಕಿದ್ದರು. ಮಕ್ಕಳಿಗೆ ಯಕ್ಷಗಾನ ಅರ್ಥಗಾರಿಕೆ, ಭಾಗವತಿಕೆ, ಸಂಗೀತವನ್ನು ಕಲಿಸುತ್ತಿದ್ದರು. ನಾಟಕ ರಂಗಭೂಮಿಗೆ ಸಂಗೀತ ನೀಡುತ್ತಿದ್ದರು.

RELATED ARTICLES  ರೈಲು ಬಡಿದು ಸಾವಿಗೀಡಾದ ಆಕಳು : ರಿಕ್ಷಾ ಮೇಲೆ ಬಿದ್ದು ರಿಕ್ಷಾ ನುಜ್ಜುಗುಜ್ಜು.

ಮೃತರು ತಂದೆ, ತಾಯಿ, ಓರ್ವ ಪುತ್ರ, ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಯಕ್ಷಲೋಕ ಇವರ ದಾರುಣ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.