ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕರಾಗಿ ಯುವ ಮುಖಂಡ ಭಾಸ್ಕರ್ ಪಟಗಾರ ಅವರನ್ನ ನೇಮಕ ಮಾಡಿ ಪಕ್ಷ ಆದೇಶಿಸಿದೆ. ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಮತ್ತು ಪಕ್ಷದ ಕಾರ್ಯಕ್ರಮಗಳ ಸಮರ್ಪಕ ನಿರ್ವಹಣೆ ಹಾಗೂ ಸ್ಥಳೀಯ ರಾಜಕೀಯ ವಿದ್ಯಮಾನಗಳ ವಸ್ತುಸ್ಥಿತಿ ಅಧ್ಯಯನ ಮತ್ತು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಭಾಸ್ಕರ್ ಪಟಗಾರ ಅವರನ್ನ ಕೆಪಿಸಿಸಿ ಸಂಯೋಜಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರ ಅನುಮೋದನೆಯ ಮೇರೆಗೆ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭಾಸ್ಕರ್ ಪಟಗಾರ್ ಅವರನ್ನ ನಿಯೋಜಿಸಲಾಗಿದ್ದು ಸ್ಥಳೀಯ ಮುಖಂಡರುಗಳ ಸಹಕಾರದೊಂದಿಗೆ ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂದಡು ಕೆಪಿಸಿಸಿ ನೀಡುವ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಅದರ ವರದಿ ನೀಡುವಂತೆ ಪಕ್ಷದ ವತಿಯಿಂದ ಸೂಚಿಸಲಾಗಿದೆ.