ಬೆಂಗಳೂರು : ದಿನೇ ದಿನೇ ಹೊಂದಿಲ್ಲೊಂದು ರೀತಿಯ ಹವಾಮಾನ ವೈಪರಿತ್ಯ ಉಂಟಾಗುತ್ತದೆ. ಇದರಿಂದಾಗಿ ಜನಜೀವನ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಹೀಗೆ ಮಳೆ, ಜೊತೆಗೆ ಶೀತಗಾಳಿ ಆಗುತ್ತಿರುವುದು ಜನರನ್ನು ಹೈರಾಣಗೊಳಿಸಿದೆ. ಅದರಲ್ಲೂ ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಅವರ ಫಜೀತಿ ಆ ದೇವರಿಗೇ ಪ್ರೀತಿ ಎಂಬಂತಾಗಿದೆ. ಮನೆಗೊಬ್ಬರಂತೆ ಜ್ವರ, ಅದೂ ಇದೂ ಅಂತಾ ಮಲಗಿರುವುದೇ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ವಿಭಿನ್ನ ರೀತಿಯ ಜ್ವರ ಕಾಣಿಸಿಕೊಂಡು ಇದೀಗ ಜನರು ಗಂಗಾಲಾಗುವಂತೆ ಮಾಡಿದೆ. ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಇದೀಗ ರಾಜಧಾನಿಯಲ್ಲಿ ಬ್ಲೂ ಫೀವರ್ ಭೀತಿ ಪ್ರಾರಂಭವಾಗಿದೆ.
ಶೀತ ಕೆಮ್ಮು ಎಂದು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಮಕ್ಕಳು ಬೆಂಗಳೂರಿನಲ್ಲಿ ಜಾಸ್ತಿಯಾಗಿದ್ದಾರೆ. ಸೈಕ್ಲೋನ್ ಎಫೆಕ್ಟ್ ನಿಂದ ಮಾಮೂಲಿ ಶೀತ ಜ್ವರ ಭಾದೆ ಕಾಣಿಸಿಕೊಂಡಿದೆ ಎಂದು ಜನ ಯಾಮಾರುತ್ತಿದ್ದಾರೆ. ಥಂಡಿ ಗಾಳಿಗೆ, ಬಿಡದ ಮಳೆಯಿಂದ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಇರಬಹುದು ಎಂದು ಸುಮ್ಮನಾಗುತ್ತಿದ್ದಾರೆ. ಆದರೆ ವೈರಲ್ ಇನ್ಫೆಕ್ಷನ್ ಮಧ್ಯೆ ಮತ್ತೊಂದು ಹೊಸ ರೋಗ ಕಾಲಿಟ್ಟಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ.
ರಾಜಧಾನಿಯಲ್ಲಿ ಮಕ್ಕಳಲ್ಲಿ ಕಾಣಿಸ್ತಿದೆ ಬ್ಲೂ ಫೀವರ್. ರಾಕಿ ಮೌಂಟೇನ್ ಸ್ಪಾಟೆಡ್ ಫೀವರ್ ಎಂದು ಕರೆಸಿಕೊಳ್ಳುವ ಈ ಬ್ಲೂ ಫೀವರ್ ಅಮೆರಿಕಾ, ಕೆನಾಡದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಪ್ರಾಣಿಗಳ ಉಣ್ಣೆಯಿಂದ ಇದು ಹರಡುವ ಸಾಧ್ಯತೆಯಿರುತ್ತದೆ. ನಾಯಿಗಳ ಟಿಕ್ ಫೀವರ್ನಿಂದ ಸೋಂಕು ಹರಡುವ ಸಾಧ್ಯತೆಯಿದೆ.
ನಂತರ, ಇದೇ ಬ್ಲೂ ಫೀವರ್ ಗಂಭೀರ ಸ್ವರೂಪ ಪಡೆದಾಗ ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ ಬಗ್ಗೆ ವರದಿಯಾಗಿದೆ.