ಹೊನ್ನಾವರ : ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಂಬಂಧಿಸಿದ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಫೈ ಓವರ್, ಸರ್ವೀಸ್ ರಸ್ತೆ, ಹಳದೀಪುರದಿಂದ ಅನಂತವಾಡಿವರೆಗೆ ಅವಶ್ಯವಿರುವಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿ ಕೊಟ್ಟು ಹೊನ್ನಾವರದ ಸಾರ್ವಜನಿಕರ ಜೀವನ್ಮರಣ ಹೋರಾಟಕ್ಕೆ ಕಾರಣವಾಗುತ್ತಿರುವ ಹೆದ್ದಾರಿ ಅಪಘಾತಗಳಿಗೆ ತಡೆ ನೀಡಿ ಸೂಕ್ತ ರೀತಿಯಲ್ಲಿ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ.

ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಂ. 66 ರಲ್ಲಿ ಫೈ ಓವರ್, ಸರ್ವೀಸ್ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಎಡ ಬಲ ಪಕ್ಕಗಳಲ್ಲಿ ಅತಿ ಅಗತ್ಯವಿದೆ. ದಿನ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಸಾರ್ವಜನಿಕರು ಕೋರ್ಟು ಕಚೇರಿ, ಆಸ್ಪತ್ರೆ ಕೆಲಸಗಳಿಗೆ ಮತ್ತು ಹೊನ್ನಾವರ ಪಟ್ಟಣಕ್ಕೆ ಹೋಗಬೇಕಾದರೆ ಏಳೆಂಟು ಕಡೆಗಳಲ್ಲಿ ರಸ್ತೆ ದಾಟಿಕೊಂಡೇ ಹೋಗುವುದು ಅನಿವಾರ್ಯವಾಗಿದೆ. ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರು, ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದು ನಮ್ಮಮುಖ್ಯ ಬೇಡಿಕೆಗಳಲ್ಲಿ ಒಂದಾಗಿದ್ದು, ಇದಕ್ಕೆ ತಾಲೂಕಿನ ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತಗಳಲ್ಲಿ ಸಭೆ ನಡೆಸಿದ್ದು ಎಲ್ಲ ಕಡೆಯಿಂದಲೂ ಹಕ್ಕೊತ್ತಾಯಕ್ಕೆ ಧರಣಿ ಸತ್ಯಾಗ್ರಹ ನಡೆಸಲು ತಯಾರಿ ನಡೆಸುವಂತೆ ಸಾರ್ವಜನಿಕರು ಸಂಘ ಸಂಸ್ಥೆಗಳಿಂದ ಒತ್ತಡ ಬರುತ್ತಿದೆ. ಈ ಕುರಿತು ಡಿಸೆಂಬರ 31 ರೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹಲವು ಸಂಘಟನೆಗಳು ಮತ್ತು ಸಹಯೋಗದೊಂದಿಗೆ ಧರಣಿ ಸತ್ಯಾಗ್ರಹ ನಡೆಸುವುದು. ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

RELATED ARTICLES  ನಾಳೆ ಕುಮಟಾ ಲಾಯನ್ಸ್ ಪದಾಧಿಕಾರಿಗಳ ಪದಗ್ರಹಣ

ಸಾರ್ವಜನಿಕರ ಸಂಘಟನೆಯ ಅಧ್ಯಕ್ಷ ಜಿ.ಎನ್.ಗೌಡ, ಕಾರ್ಯದರ್ಶಿ ಪ್ರಭು ಪಟಗಾರ, ಗೌರವ ಸಲಹೆಗಾರರಾದ ಡಾ.ಎಸ್.ಡಿ.ಹೆಗಡೆ, ಕಾರ್ಯಾಧ್ಯಕ್ಷ ಎಸ್.ಜಿ.ಹೆಗಡೆ, ಉಪಾಧ್ಯಕ್ಷ ಎಮ್.ಆರ್.ಹೆಗಡೆ, ಬಾಬಾ ಪಕಿ, ಜಗದೀಶ ನಾಯ್ಕ, ಶ್ರೀಕಾಂತ ನಾಯ್ಕ, ರಾಘು ನಾಯ್ಕ, ಅನಿತಾ ಶೇಟ್, ದೇವಪ್ಪ ಕೆ.ಮೇಸ್ತ, ಮಂಜುನಾಥ ಟಿ.ಭಟ್ಟ, ಮಂಜುನಾಥ
ಎಮ್.ಗೌಡ, ನಾರಾಯಣ ನಾಯ್ಕ ಮುಂತಾದವರು ಇದ್ದರು.

RELATED ARTICLES  ಮಿಸ್ಟರ್ ಏಷಿಯಾ ದೇಹದಾರ್ಢ್ಯತೆಯಲ್ಲಿ ಮಣಿಕಂಠ ಮುರ್ಡೇಶ್ವರ ನಿಗೆ 3 ನೇ ಸ್ಥಾನ:ಸಹಾಯ ಹಸ್ತದ ನೀರಿಕ್ಷೆಯಲ್ಲಿ ಮಣಿಕಂಠ